×
Ad

ಗಾಂಜಾ ಬೆಳೆ: ಆರೋಪಿಗೆ ಸಜೆ

Update: 2017-06-08 23:14 IST

ಸಾಗರ, ಜೂ.8: ತನ್ನ ಬಗರ್‌ಹುಕುಂ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಹಿನ್ನೆಲೆಯಲ್ಲಿ ತಾಲೂಕಿನ ಆನಂದಪುರಂ ಹೋಬಳಿಯ ಗೌತಮಪುರದ ನಾಗೇಶ್ ಬಿನ್ ಕೆರೆಹಳ್ಳಿ ನಾಗೇಶ್ ಎಂಬವರಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ. 2015ರ ಅ.25ರಂದು ಖಚಿತ ಮಾಹಿತಿ ಮೇರೆಗೆ ಅಂದಿನ ಎಎಸ್ಪಿ ನಿಶಾ ಜೇಮ್ಸ್ ನೇತೃತ್ವದಲ್ಲಿ ಪಿಎಸ್ಸೈ ಶಶಿಕಾಂತ್ ಹಾಗೂ ಸಿಬ್ಬಂದಿ ನಾಗೇಶ್ ತೋಟಕ್ಕೆ ದಾಳಿ ನಡೆಸಿದ್ದರು ಎನ್ನಲಾಗಿದೆ.
ದಾಳಿ ವೇಳೆ ನಾಗೇಶ ಅವರು ತಮ್ಮ ಬಗರ್‌ಹುಕುಂ ಜಮೀನಿನಲ್ಲಿ ಬೆಳೆದ 12ಸಾವಿರ ರೂ. ಮೌಲ್ಯದ 12 ಕೆ.ಜಿ. ಹಸಿ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. ವಿಚಾರಣೆಯ ವೇಳೆ ಸೂಕ್ತ ಸಾಕ್ಷ್ಯಾಧಾರ ಲಭ್ಯವಾದ ಹಿನ್ನೆಲೆಯಲ್ಲಿ ನಾಗೇಶ್ ಗಾಂಜಾ ಬೆಳೆದಿರುವುದು ಸಾಬೀತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News