×
Ad

ಸಿಂಗಟಗೆರೆ ಕೆರೆ ದುರಸ್ಥಿಗಾಗಿ2.50 ಕೋಟಿ ರೂ. ಅನುದಾನ: ಮಹೇಶ್ ಒಡೆಯರ್

Update: 2017-06-09 18:08 IST

ಕಡೂರು ಜೂ. 9: ಸಿಂಗಟಗೆರೆ ಕೆರೆ ದುಸ್ಥಿಗಾಗಿ 2.50 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಜಿಪಂ ಸದಸ್ಯ ಮಹೇಶ್ ಒಡೆಯರ್ ತಿಳಿಸಿದ್ದಾರೆ.

ಅವರು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಸಿಂಗಟಗೆರೆ ಕೆರೆ ಏರಿ ದುರಸ್ಥಿಗೆ ಹಾಗೂ ಕೆರೆ ಅಭಿವೃದ್ದಿಗಾಗಿ ಅನುದಾನಕ್ಕಾಗಿ ಪ್ರಯತ್ನ ನೆಸುತ್ತಿದ್ದರೂ ನೆನೆಗುದಿಗೆ ಬಿದ್ದಿತ್ತು. ಕಳೆದ ವಾರ ಶಾಸಕ ವೈ.ಎಸ್.ವಿ. ದತ್ತ ಹಾಗೂ ಸಿಂಗಟಗೆರೆಯ ಹಲವಾರು ಮುಖಂಡರುಗಳು ಸೇರಿ ಸಣ್ಣ ನೀರಾವರಿ ಸಚಿವರಾದ ಟಿ.ಬಿ. ಜಯಚಂದ್ರ ಇವರ ಬಳಿಗೆ ನಿಯೋಗ ಹೋಗಿ ಮನವಿ ಮಾಡಿದ್ದರ ಮೇರೆಗೆ ಹಾಗೂ ಸಿಂಗಟಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ್ದ ಭರವಸೆಯ ಮೇರೆಗೆ ಸಚಿವರು 2.50 ಕೋಟಿ  ರೂ. ವೆಚ್ಚದ ಕ್ರಿಯಾಯೋಜನೆಗೆ ಸೇರಿಸಿರುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

 ಕ್ಷೇತ್ರದ ಶಾಸಕರನ್ನು ಒಳಗೊಂಡ ನಿಯೋಗವು ಸಚಿವ ಜಯಚಂದ್ರ ಇವರ ಬಳಿ ನಿಯೋಗ ತೆರಳಿ ಮಾನವಿ ಮಾಡಲಾಗಿದ್ದು, ಈಗಾಗಲೇ ಈ ಹಿಂದೆ ರೂ. 50 ಲಕ್ಷ ಅನುದಾನವನ್ನು ಕೆರೆಯ ಅಭಿವೃದ್ದಿಗೆ ಹಣ ನೀಡಲಾಗಿದ್ದು, ಈ ಹಣದಲ್ಲಿ ಕೆರೆಯ ಹೊಳೆತ್ತುವುದು, ಕೆರೆಗೆ ಮೆಟ್ಟಿಲು ನಿರ್ಮಾಣ ಮತ್ತು ಕೆರೆಯ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.

 ತಾಪಂ ಉಪಾಧ್ಯಕ್ಷ ಪಿ.ಸಿ. ಪ್ರಸನ್ನ, ಸಿಂಗಟಗೆರೆ ಶ್ರೀ ಕಲ್ಲೇಶ್ವರ ದೇವಾಲಯದ ಕನ್ವೀನಿಯರ್ ನಾಗರಾಜಪ್ಪ, ಕಾರ್ಯದರ್ಶಿ ರಮೇಶ್, ದೇವಾಲಯ ಸಮಿತಿ ಸದಸ್ಯರಾದ ಕಲ್ಲೇಶಪ್ಪ, ಮೂರ್ತಪ್ಪ, ಎಪಿಎಂಸಿ ನಿರ್ದೇಶ ಬಿದರೆ ಜಗದೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News