ಸಂಪಾಜೆಯಲ್ಲಿ ಸ್ವಚ್ಛತಾ ಜಾಗೃತಿ

Update: 2017-06-09 12:57 GMT

ಮಡಿಕೇರಿ ಜೂ.9 : ಸಂಪಾಜೆ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಧೆಗಳ ಸಂಯುಕ್ತಾಶ್ರಯದಲ್ಲಿ ಕೊಯನಾಡಿನಿಂದ ಸಂಪಾಜೆ ವರಗೆ ಸ್ವಚ್ಛ ಭಾರತ್ ಅಭಿಯಾನ ನಡೆಸಲಾಯಿತು.

ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಕರಪತ್ರ ಹಂಚಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಚಂದ್ರ ಕಳಗಿ, ಪ್ರವಾಸಿಗರು ಪ್ಲಾಸ್ಟಿಕ್ ಬಳಸುವುದು ಅಥವಾ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಿಸಾಡುವುದನ್ನು ನಿಷೇಧಿಸಲಾಗಿದೆ. ಪರಿಸರಕ್ಕೆ ಹಾನಿ ಉಂಟು ಮಾಡುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಪ್ರಯಾಣಿಕರು  ಪ್ಲಾಸ್ಟಿಕ್ ಬಿಸಾಡುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೋಲಿಸರಿಗೆ ಸೂಚಿಸಲಾಗಿದೆ ಎಂದರು. ಸ್ವಚ್ಛ ಭಾರತ್, ಸ್ವಚ್ಚ ಸಂಪಾಜೆ, ಸ್ವಚ್ವ ಕೊಡಗು ಆಗಬೇಕೆನ್ನುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದಾಗಿ ಹೇಳಿದರು.

  ಉಪಾಧ್ಯಕ್ಷರಾದ ಬಿ.ಆರ್.ಸುಂದರ, ಗ್ರಾಮದ ಪ್ರಮುಖರಾದ ಉಲ್ಲಾಸ ಕೇನಾಜೆ, ಮ್ಯೊದಿನ್‌ಕುಂಞ, ಮೀನಾಕುಮಾರಿ, ಮಾಲತಿ ನಾರಾಯಣ, ರಾಜೇಶ್ವರಿ, ಹೇಮಾವತಿ, ಪೋಲಿಸ್ ಎ.ಎಸ್.ಐ ಸುಕುಮಾರ್, ಪಿಡಿಒ ಶೋಭರಾಣಿ, ಕೆ.ಎಸ್.ತೀರ್ಥಪ್ರಸಾದ್, ಮಾಯಿಲಪ್ಪ ಓ.ಆರ್.ಶ್ರೀಧರ, ಯಶೋಧರ, ಜಯರಾಜ್, ಬಬಿನ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News