ರೈಲು ಹರಿದು ವ್ಯಕ್ತಿ ಸಾವು
Update: 2017-06-09 20:07 IST
ತುಮಕೂರು,ಜೂ.9: ದ್ವಿಚಕ್ರ ವಾಹನ ಪಂಕ್ಚರ್ ಆದ ಪರಿಣಾಮ ರೈಲ್ವೆ ಹಳಿ ಮೂಲಕ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ರೈಲು ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಭೀಮಸಂದ್ರದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಭೀಮಸಂದ್ರದ ವಾಸಿ ಹಾಗೂ ಸಾಯಿ ಗೌರ್ಮೆಂಟ್ಸ್ ನೌಕರ ಸಿದ್ದೇಶ್ (30) ಎಂದು ಗುರುತಿಸಲಾಗಿದೆ. ಈತ ಬೆಳಗ್ಗೆ 8.30ರ ಸಮಯದಲ್ಲಿ ಕೆಲಸಕ್ಕೆ ಹೋಗಲೆಂದು ಸಿದ್ದನಾಗಿ ದ್ವಿಚಕ್ರ ವಾಹನ ತೆಗೆದುಕೊಂಡು ಬಂದಿದ್ದಾರೆ. ಆದರೆ ದ್ವಿಚಕ್ರ ವಾಹನ ಪಂಕ್ಚರ್ ಆದ ಪರಿಣಾಮ ಅದನ್ನು ತಳ್ಳಿಕೊಂಡು ರೈಲ್ವೆ ಹಳಿ ದಾಟಲು ಯತ್ನಿಸಿದ್ದಾರೆ. ದುರಾದೃಷ್ಟವಶಾತ್ ಆತನಿಗೆ ಗೋಚರಿಸದೆ ರೈಲುಗಾಡಿ ಬಂದೇ ಬಿಟ್ಟಿದ್ದು, ಈತ ರೈಲಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾನೆ. ಚ ಪುಡಿ ಪುಡಿಯಾಗಿದೆ.ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.