ಸಾಂಗ್ರಿ ಶಿಖರವೇರಿ ಆದಿವಾಸಿ ಮಕ್ಕಳಿಂದ ಹೊಸ ದಾಖಲೆ

Update: 2017-06-09 16:56 GMT

ಮಡಿಕೇರಿ, ಜೂ.9: ಜಿಲ್ಲೆಯ ತಡಿಯಂಡಮೋಳ್ ಸೇರಿದಂತೆ ಹಲವು ಬೆಟ್ಟಗುಡ್ಡ ಪ್ರದೇಶಗಳಲ್ಲಿ ಚಾರಣ ಹೋಗುವುದನ್ನು ಕೇಳಿದ್ದೇವೆ. ಆದರೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬಳಿಯ ಬೃಹತ್ ಸಾಂಗ್ರಿ ಪರ್ವತ ಶಿಖರವೇರಿ ಹೊಸ ದಾಖಲೆಯನ್ನು ಕೊಡಗಿನ ಆದಿವಾಸಿ ಮಕ್ಕಳು ನಿರ್ಮಿಸಿದ್ದಾರೆ.


  ಜಿಪಂ., ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ ಆದಿವಾಸಿ 30 ಯುವ ಜನರನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಹಿಮಾಲಯನ್ ವೌಂಟೇನಿಯನ್ ಸಂಸ್ಥೆಗೆ ವಿವಿಧ ತರಬೇತಿಗಾಗಿ ಕಳುಹಿಸಿಕೊಡಲಾಗಿತ್ತು, ಜಿಲ್ಲೆಯ ವಿವಿಧ ಹಾಡಿಗಳ ಆಯ್ದ ಆದಿವಾಸಿ ಮಕ್ಕಳು 17 ಸಾವಿರ ಅಡಿ ಎತ್ತರ ಪ್ರದೇಶವಾದ ಸಾಂಗ್ರಿ ಶಿಖರವನ್ನೇರಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಡಾರ್ಜಿಲಿಂಗ್‌ಗೆ ತೆರಳಲಿದ್ದ 30 ಯುವಜನರಲ್ಲಿ 26 ಹುಡುಗರು, 4 ಹುಡುಗಿಯರು ಸೇರಿದಂತೆ ಒಂದು ತಿಂಗಳ ಡಾರ್ಜಿಲಿಂಗ್ ಪ್ರವಾಸದಲ್ಲಿ 20 ದಿನಗಳ ಕಾಲ ಪ್ರತಿನಿತ್ಯ 10 ಕಿ.ಮೀ. ಹೆಚ್ಚು ಓಟ ಓಡು ವುದು, ಯೋಗ, ವ್ಯಾಯಾಮ ತರಬೇತಿ ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎವ ರೆಸ್ಟ್ ಶಿಖರ ವೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಪಂ ಸಿಇಒ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.  


ಜಿಲ್ಲೆಯ ಆದಿವಾಸಿ ಮಕ್ಕಳಿಗೆ ಪರ್ವತಾರೋಹಣ ವಿಶಿಷ್ಟ ಕಾರ್ಯಕ್ರಮದ ಪ್ರವಾಸವನ್ನು ಏರ್ಪಡಿ ಸಲಾಗಿತ್ತು, ಆದಿವಾಸಿ ಮಕ್ಕಳು ಎವರೆಸ್ಟ್ ಶಿಖರ ಏರಿ ವಿಶ್ವದಲ್ಲಿ ದಾಖಲೆ ಮಾಡಬೇಕು ಎಂಬುದು ಬಯಕೆಯಾಗಿದ್ದು, ಆ ನಿಟ್ಟಿನಲ್ಲಿ ಡಾರ್ಜಿಲಿಂಗ್ ಪ್ರವಾಸಕ್ಕೆ ಅವಕಾಶ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಬೇಸಿಕ್ ಕೋರ್ಸ್‌ನ ನಂತರ ಅಡ್ವಾನ್ಸ್ ತರಬೇತಿ ಪಡೆದು ಹಿಮಾಲಯ ಪರ್ವತ ಏರಬೇಕೆಂಬುದು ಆಶಯವಾಗಿದೆ. ಆ ನಿಟ್ಟಿನಲ್ಲಿ ಆದಿವಾಸಿ ಮಕ್ಕಳಿಗೆ ತರಬೇತಿ ನೀಡಲಾಗುವುದು. ಮಾರ್ಗದರ್ಶಕರಾದ ವಿರೂಪಾಕ್ಷ ರೈ ಹಾಗೂ ಬರಮಪ್ಪ ಪಸಗಾರ್ ಅವರ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News