ಪತ್ರಕರ್ತನಿಗೆ ಹಲ್ಲೆ, ಆರೋಪಿಯ ಬಂಧನ: ಪ್ರಕರಣ ದಾಖಲು

Update: 2017-06-10 11:52 GMT

ಸಿದ್ದಾಪುರ, ಜೂ. 10: ಪತ್ರಕರ್ತನಿಗೆ ಯುವಕನೋರ್ವ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆಲ್ಯಹುದಿಕೆರಿ ನಿವಾಸಿ ದೀಪಕ್ ಎಂಬಾತ ನಗರ ಪತ್ರಕರ್ತರ ಸಂಘದ ಕೋಶಾಧಿಕಾರಿ ಎಂ.ಎ. ಅಝೀಝ್ ಎಂಬವರಿಗೆ ಹಲ್ಲೆ ಮಾಡಿ, ಗಾಯಗೊಳಿದ್ದ ಎಂದು ದೂರಲಾಗಿತ್ತು.

ಶುಕ್ರವಾರ ರಾತ್ರಿ ನೆಲ್ಯಹುದಿಕೆರಿ ಪಟ್ಟಣದಲ್ಲಿ ಅಂಗಡಿಯೊಂದರ ಕೆಲಸ ನಡೆಯುತ್ತಿದ್ದ ಸಂದರ್ಭ ಯುವಕರ ಗುಂಪೊಂದು ಅಂಗಡಿ ಕೆಲಸಕ್ಕೆ ಅಡಚಣೆ ಉಂಟುಮಾಡಿದ್ದು, ಈ ಸಂದರ್ಭ ಅಲ್ಲಿಗೆ ಬಂದ ಅಝೀಝ್ ಗುಂಪಗೆ ಘಟನೆಯ ಬಗ್ಗೆ ಮನವರಿಕೆ ಮಾಡಲು ಯತ್ನಿಸಿದ್ದು, ಗುಂಪಿನಲ್ಲಿದ್ದ ನೆಲ್ಯಹುದಿಕೇರಿಯ ದೀಪಕ್ ಎಂಬಾತ ಅವ್ಯಾಚ ಶಬ್ಧಗಳಿಂದ ಬೈದು, ಕಲ್ಲಿನಿಂದ ಮುಖಕ್ಕೆ ಹೊಡೆದ ಪರಿಣಾಮ ಅಝೀಝ್ ಗಾಯಗೊಂಡು ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಂಡನೆ: ನಗರ ಪತ್ರಕರ್ತರ ಸಂಘದ ಕೋಶಾಧಿಕಾರಿ ಅಝೀಝ್ ಮೇಲಿನ ಹಲ್ಲೆಗೆ ಸಿದ್ದಾಪುರ ನಗರ ಪತ್ರಕರ್ತರ ಸಂಘ ಖಂಡನೆ ವ್ಯಕ್ತಪಡಿಸಿದೆ.

ಅಶಾಂತಿ ಸೃಷ್ಟಿಗೆ ಯತ್ನ: ಕ್ಷುಲ್ಲಕ ವಿಷಯದಲ್ಲಿ ಪತ್ರಕರ್ತನ ಮೇಲೆ ನಡೆದ ಹಲ್ಲೆ ಘಟನೆಯ ಬಳಿಕ ನೆಲ್ಯಹುದಿಕೇರಿ ಬರಡಿಯ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಬರಹಗಳ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದು, ಸಿದ್ದಾಪುರ ಸುತ್ತ ಮುತ್ತಲಿನಲ್ಲಿ ಪರಸ್ಪರ ಸೌಹಾರ್ದತೆಯಿಂದ ಇರುವ ಜನರ ಮಧ್ಯೆ ಒಡಕು ಮೂಡಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News