×
Ad

ರೈತರ ಮೇಲೆ ಗೋಲಿಬಾರ್: ಕ್ರಮಕ್ಕೆ ಯುವ ಕಾಂಗ್ರೆಸ್ ಆಗ್ರಹ

Update: 2017-06-10 17:32 IST

ಚಿಕ್ಕಮಗಳೂರು, ಜೂ.10: ಮಧ್ಯಪ್ರದೇಶದ ಮಂಡಸಾರದಲ್ಲಿ ಸಾಲ ಮನ್ನಾಕ್ಕೆ ಹಾಗೂ ಬೆಂಬಲ ಬೆಲೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿದ ಬಿಜೆಪಿ ಸರಕಾರದ ಕೃತ್ಯವನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಾಲ ಮನ್ನಾ ಸೇರಿದಂತೆ ತೊಗರಿಬೇಳೆ, ಈರುಳ್ಳಿ ಬೆಂಬಲ ಬೆಲೆ ಕೇಳಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಸರಕಾರವನ್ನು ಒತ್ತಾಯಿಸಿ ರೈತರು ಪ್ರತಿಭಟಿಸುತ್ತಿದ್ದ ವೇಳೆ ಹೋರಾಟ ಹತ್ತಿಕ್ಕಲು ಮಾನವೀಯತೆಯನ್ನು ಮರೆತು, 6 ಜನ ರೈತರನ್ನು ಗೋಲಿಬಾರ್ ಮಾಡಿಸಿದ ಮಧ್ಯಪ್ರದೇಶ ಬಿಜೆಪಿ ಸರಕಾರದ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.


ತಮ್ಮದು ರೈತರ ಪರ ಸರಕಾರ ಎನ್ನುವ ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ನೈತಿಕತೆ ಇದ್ದರೆ, ರೈತರ ಮೇಲೆ ಗೋಲಿಬಾರ್ ಮಾಡಿದ ಸರಕಾರವನ್ನು ವಜಾಗೊಳಿಸಲಿ. ಅನ್ನ ನೀಡುವ ರೈತನ ಮೇಲೆ ಗೋಲಿಬಾರ್ ನಡೆಸುವುದು ಬಿಜೆಪಿಯ ಅತ್ಯಂತ ಪ್ರಮುಖ ನೀತಿಯಾಗಿದೆ ಎಂದು ಆರೋಪಿಸಿದರು.
  
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜಿ.ಕಾರ್ತಿಕ್, ಪ್ರಧಾನ ಕಾರ್ಯದರ್ಶಿ ತಿಲಕ್, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಸಿ.ಬಿ.ಪುಷ್ಪಲತಾ, ಎ.ಎಂ.ಮಂಜುನಾಥ್, ಸಿ.ಆರ್.ಕೌಶಿಕ್, ಶ್ರೀಮತಿ ಚೇತನ, ಯುವ ಕಾಂಗ್ರೆಸ್ ಸದಸ್ಯರಾದ ಜಿ.ಭರತ್, ಧರ್ಮ, ಲಾಕೇಶ್, ಸುರೇಶ್, ವಿಜಯ್, ನಗರ ಸಭೆ ಸದಸ್ಯ ರೂಬೆನ್ ಮೊಸಸ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಸಂದೇಶ್, ಸಿಲ್ವಸ್ಟರ್, ಪ್ರೊಪೇಷನಲ್ ಸಮಿತಿ ಜಿಲ್ಲಾ ಅಧ್ಯಕ್ಷ ಯದುಕುಮಾರ್, ನಗರಸಭೆ ಮಾಜಿ ಸದಸ್ಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News