×
Ad

ಬೆಂಕಿ ತಗಲಿ ಮೂವರು ಮಹಿಳೆಯರಿಗೆ ಸುಟ್ಟ ಗಾಯ

Update: 2017-06-10 18:03 IST

ಹಾಸನ,ಜೂ.10: ಮನೆಯೊಂದರಲ್ಲಿ ಗ್ಯಾಸ್ ಲೀಕ್‌ಗೊಂಡ ಪರಿಣಾಮ ಮೂವರು ಮಹಿಳೆಯರಿಗೆ ಬೆಂಕಿ ತಗಲಿ ಸುಟ್ಟ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ 9-30ರ ಸಮಯದಲ್ಲಿ ಸಂಭವಿಸಿದೆ.

ತಾಲೂಕಿನ ನಿಂಗೇಗೌಡನಕೊಪ್ಪಲಿನ ನಿವಾಸಿ ನಯನ (37), ನಾಗರತ್ನ (46) ಹಾಗೂ ನಂಜಮ್ಮ (60) ಎಂಬುವರೇ ಬೆಂಕಿ ತಗಲಿ ಸುಟ್ಟ ಗಾಯಗಳಾದ ಮಹಿಳೆಯರು. ಗ್ರಾಮದ ದೇವಸ್ಥಾನದಲ್ಲಿ ಮಹಿಳಾ ಸಂಘದಲ್ಲಿ ಪಾಲ್ಗೊಂಡಿದ್ದ ಮೂವರು ಮಹಿಳೆಯರು, ಸಂಘ ಮುಗಿದ ಮೇಲೆ ಮನೆ ಬಳಿ ಬಂದಾಗ ಮನೆಯಿಂದ ಗ್ಯಾಸ್ ವಾಸನೆ ಹೊರ ಬಂದಿದೆ. ತಕ್ಷಣ ಬೀಗ ತೆಗೆದು ಒಳ ಹೋಗಿದ್ದಾರೆ. ತಕ್ಷಣ ಸಿ ಲೆಂಡರ್‌ನ ರೆಗ್ಯೂಲೇಟರನ್ನು ಆಫ್ ಮಾಡಲಾಯಿತು. ದೇವರ ಕೋಣೆಯಲ್ಲಿ ಇದ್ದ ದೀಪದಿಂದ ಕ್ಷಣಾರ್ಧದಲ್ಲಿ ಮನೆ ಒಳಗೆ ಬೆಂಕಿ ಕಾಣಿಸಿಕೊಂಡಿತು. ಇದು ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಸಮರ್ಪಕವಾಗಿ ತಿಳಿದು ಬಂದಿರುವುದಿಲ್ಲ ಎಂದು ಗಾಯಳುಗಳು ಹೇಳಿದ್ದಾರೆ.

ತಕ್ಷಣ ಮೂವರು ಮಹಿಳೆಯರ ಮೇಲೂ ಬೆಂಕಿ ಹಚ್ಚಿಕೊಂಡಿತು. ಹೆಂಚಿನ ಮನೆಯ ಮೇಲ್ಚಾವಣಿ ಬಹುತೇಕ ಬೆಂಕಿಯಿಂದ ಬೆಂದು ಹೋಯಿತು. ತಕ್ಷಣ ನೀರು ಹಾಕಿ ಬೆಂಕಿ ನಂದಿಸಲಾಯಿತು. ಮೂವರು ಮಹಿಳೆಯರನ್ನು ನಗರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ಇವರಲ್ಲಿ ನಾಗರತ್ನ ಮತ್ತು ನಂಜಮ್ಮ ಎಂಬುವರಿಗೆ ತೀವ್ರತರವಾದ ಗಾಯಗಳಾಗಿವೆ. 3 ಜನ ಮಹಿಳೆಯರು ಸಂಬಂಧಿಕರಾಗಿದ್ದು, ಗ್ಯಾಸ್ ವಾಸನೆ ಬರುತ್ತಿದೆ ಎಂದು ನೋಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News