ಶಿವಮೊಗ್ಗ: 10 ನೇ ತರಗತಿ ವಿದ್ಯಾರ್ಥಿ ನಾಪತ್ತೆ
ಶಿವಮೊಗ್ಗ, ಜೂ. 10: ಶಾಲೆಗೆ ತೆರಳಿದ್ದ 10 ನೇ ತರಗತಿ ವಿದ್ಯಾರ್ಥಿಯೋರ್ವ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ವರದಿಯಾಗಿದೆ.
ಮೀನಾಕ್ಷಿ ಭವನ್ ಸಮೀಪವಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಅಮಿತ್ (17) ನಾಪತ್ತೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಅಪ್ಪಾಜಿರಾವ್ ಕಾಂಪೌಂಡ್ ನಿವಾಸಿ ಹನುಮಂತಪ್ಪ ಎಂಬುವರ ಪುತ್ರನಾಗಿದ್ದಾನೆ.
ಎಂದಿನಂತೆ ಬಾಲಕನು ಶಾಲೆಗೆ ತೆರಳಿದ್ದು, ಬೆಳಿಗ್ಗೆ ಶಾಲೆಯಲ್ಲಿದ್ದ ಆತನನ್ನು ತಂದೆ ಹನುಮಂತಪ್ಪರವರು ಮಾತಾಡಿಸಿಕೊಂಡು ಬಂದಿದ್ದರು. ಮಧ್ಯಾಹ್ನ ಅವರ ತಾಯಿ ಶಾಲೆಗೆ ತೆರಳಿದಾಗ ಅಮಿತ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತಲು ಹುಡುಕಾಡಿದರು ಆತನ ಸುಳಿವು ಲಭ್ಯವಾಗಿಲ್ಲ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ನಾಪತ್ತೆಯಾದ ಬಾಲಕ 5 ಅಡಿ 5 ಇಂಚು ಎತ್ತರವಿದ್ದು, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದಾನೆ. ಕನ್ನಡ ಭಾಷೆ ಗೊತ್ತಿದೆ. ಕಾಣೆಯಾದ ವೇಳೆ ಶಾಲಾ ಸಮವಸ್ತ್ರ ತೊಟ್ಟಿದ್ದ. ಈತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲ್ಲವೇ ಕಂಟ್ರೋಲ್ ರೂಂ ಸಂಖ್ಯೆ : 100 ಕ್ಕೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.