ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ವಿವಾಹ

Update: 2017-06-11 14:46 GMT

ಹನೂರು, ಜೂ.11: ಇತಿಹಾಸ ಪ್ರಸಿದ್ಧ ಹಾಗೂ ಪವಿತ್ರ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ವಿವಾಹ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಯು.ಟಿ.ಖಾದರ್  ನಂತರ ಮಾತನಾಡಿದ ಅವರು ಕಳೆದ 2-3 ವರ್ಷಗಳಲ್ಲಿ ರಚಿಸಿದ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು 42 ಕೋಟಿ ರೂ. ಕಾಮಗಾರಿಯನ್ನು ಮುಗಿಸಿದ್ದು ಮತ್ತೆ 53 ಕೋಟಿ ರೂ. ಅಭಿವೃದ್ದಿ ಕಾಮಗಾರಿ ಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರತಿಮೆಯ ನೀಲಿನಕ್ಷೆ : ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಶಿಲ್ಪಿಯಿಂದ 42 ಎಕರೆ ಜಾಗದಲ್ಲಿ 101 ಅಡಿ ಎತ್ತರದ ಪ್ರತಿಮೆಯನ್ನು ಸುಮಾರು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನೀಲಿ ನಕ್ಷೆಯನ್ನು ತಯಾರಿಸಲಾಗಿದೆ. ಅದರ ಫಲವಾಗಿ ಈಗಾಗಲೇ 21 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದರು. 

ಭಕ್ತರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದ್ದು, ಬಿಸಿಲು ಮಳೆಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಸುಮಾರು 500-600 ಜನ ತಂಗುವಂತಹ ಮೇಲ್ಚಾವಣಿಯನ್ನು ಕಟ್ಟಿಸಲಾಗುತ್ತಿದೆ. ಅದೇ ರೀತಿ ಸುಸಜ್ಜಿತ ಉಪಾಹಾರ ಗೃಹವನ್ನು ನಿರ್ಮಿಸಲು 2 ಕೋಟಿ 15 ಲಕ್ಷ ರೂ. ಗುತ್ತಿಗೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಮುಂತಾದ ಕಾಮಗಾರಿಗನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. 

ರಸ್ತೆ ಅಭಿವೃದ್ದಿಗೆ ಒತ್ತು: ಪ್ರಮುಖ ರಸ್ತೆಯಾದ ಕೊಳ್ಳೇಗಾಲದಿಂದ ಹನೂರಿನ ವರೆಗೂ 24 ಕಿ.ಮೀ ರಸ್ತೆ ಕಾಮಗಾರಿಗೆ 110 ಕೋಟಿ ರೂ.  ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಡಾಂಬರೀಕರಣಕ್ಕೆ ಚಾಲನೆ ನೀಡಲಾಗುವುದು. ಮುಂದುವರೆದ ಕಾಮಗಾರಿಯಾಗಿ ಹನೂರಿನಿಂದ ಪಾಲಾರ್ ವರೆಗೂ ರಾಷ್ಟ್ರೀಯ ಹೆದ್ದಾರಿಯಾಗಿ ಸೇರ್ಪಡೆಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನವಜೋಡಿಗಳು, ಶಾಸಕ ನರೇಂದ್ರ, ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳು, ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಗಾಯಿತ್ರಿ, ಇ.ಒ.ದರ್ಶನ್, ದೇವಸ್ಥಾನ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಈ ಸಂದರ್ಭ ಹನೂರಿನ ಪತ್ರಿಕೆ ವಿತರಕ ಮಹೇಶ್ (19) ಎಂಬವರ ಅಕಾಲಿಕ ಮರಣಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿಲತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News