ಪಟ್ಟಣದಲ್ಲಿ ಜಿ2 ಮಾದರಿಯ ಮನೆಗಳ ನಿರ್ಮಾಣ: ಹೆಬ್ಬಾರ

Update: 2017-06-11 15:28 GMT

ಮುಂಡಗೋಡ, ಜೂ.11: ಸಿಎಂ ಸಿದ್ದರಾಮಾಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಯಾರೂ ಹಸಿವೆಯಿಂದಿರಬಾರದು ಹಾಗೂ ಸೂರು ಇಲ್ಲದೆ ಕೊರಗಬಾರದೆಂದು ತಿರ್ಮಾನಕ್ಕೆ ಬಂದಿದ್ದು ಆ ಪ್ರಯುಕ್ತ ಸರಕಾರವು ಉಚಿತವಾಗಿ ಅಕ್ಕಿ ನೀಡುತ್ತಿದೆ ಹಾಗೂ ಪುಕ್ಕಟೆಯಾಗಿ ಮನೆ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು

ಅವರು ಪಟ್ಟಣ ಪಂಚಾಯತ್ ಆವರಣದಲ್ಲಿ ಪ.ಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಬರುವ ದಿನಗಳಲ್ಲಿ 10 ಲಕ್ಷಕ್ಕಿಂತ ಅಧಿಕ ಮನೆಗಳನ್ನು ಬಡವರಿಗಾಗಿ ಪುಕ್ಕಟೆಯಾಗಿ ನೀಡಲಾಗುವುದು. ನಮ್ಮ ಸರಕಾರ ಬಡವರ ಪರವಾಗಿದೆ ಅದಕ್ಕಾಗಿ ಉಚಿತವಾಗಿ ಅಕ್ಕಿ, ವಿದ್ಯಾರ್ಥಿಗಳಿಗೆ ಹಾಲು ಪುಸ್ತಕ, ಶಾದಿಭಾಗ್ಯ, ಪುಕ್ಕಟೆಯಾಗಿ ಮನೆ ಹಾಗೂ ಇನ್ನೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕ್ಷೇತ್ರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲ ವಾರ್ಡ್‌ಗಳನ್ನು ಪಕ್ಷಾತೀತವಾಗಿ ಅಭಿವೃದ್ದಿ ಪಡಿಸುತ್ತೇವೆ. ಮುಂಡಗೋಡ ಪಟ್ಟಣದಲ್ಲಿ ಸುಮಾರು 700-800 ಜನರಿಗೆ ಮನೆಗಳ ಅವಶ್ಯಕತೆ ಇದೆ ಎಂದ ಅವರು ಪಟ್ಟಣದ ಸ್ಲಂ ಪ್ರದೇಶಗಳ ಅಭಿವೃದ್ದಿ ಪಡಿಸಿ ಅಲ್ಲಿ ವಾಸಿಸುವ ಒಂದು ಮನೆಗೆ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ 200 ಮನೆಗಳನ್ನು ನಿರ್ಮಾಣ ಮಾಡಲಾಗುವುದು.

ಬರುವಂತ ದಿನಗಳಲ್ಲಿ ಹುಬ್ಬಳ್ಳಿ ಯಲ್ಲಿ ಸರಕಾರದಿಂದ ನಿರ್ಮಿತವಾಗಿರುವ ಜಿ2 ಮಾದರಿಯಲ್ಲಿ ಮನೆಗಳನ್ನು ಕಟ್ಟಲಾಗುವುದು ಎಂದರು. ನಮ್ಮ ಅಧಿಕಾರವಧಿಯಲ್ಲಿ ಮುಂಡಗೋಡ ಪಟ್ಟಣ ಅಭಿವೃದ್ದಿಯಾಗಿದೆ ಎಂದು ಪರ ಊರಿನವರು ಹೇಳುತ್ತಿರುವುದು ಕೇಳಿ ಬರುತ್ತಿದೆ ಎಂದರು.
 ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ರವಿ ಗೌಡ ಪಾಟೀಲ, ಜಿಪಂ ಸದಸ್ಯ ಎಲ್.ಟಿ.ಪಾಟೀಲ, ತಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಪಪಂ ಅಧ್ಯಕ್ಷ ಮಹ್ಮದ್ ರಫೀಕ್ ಇನಾಮದಾರ, ಎಪಿಎಮ್‌ಸಿ ಅಧ್ಯಕ್ಷ ದೇವು ಪಾಟೀಲ, ಮಾರ್ಕೇಟಿಂಗ ಸೊಸೈಟಿ ಅಧ್ಯಕ್ಷ ಪಿ.ಎಸ್.ಸಂಗೂರಮಠ,ಎಚ್.ಎಮ್.ನಾಯಕ, ಎಪಿಎಮ್‌ಸಿ ಸದಸ್ಯ ಮಂಜುನಾಥ ವೆರ್ಣೇಕರ, ಪ.ಪಂ ಸದಸ್ಯರಾದ ಅಲ್ಲಿಖಾನ ಪಠಾಣ, ಲತೀಫ ನಾಲಬಂದ, ಎನ್.ಡಿ.ಕಿತ್ತೂರ ಯುವ ಧುರಿಣ ಮಹಮ್ಮದಗೌಸ ಮಕಾನದಾರ, ಇರ್ಫಾನ್ ಸವಣೂರ, ಆಸೀಫ ಮಕಾನದಾರ, ಜೈನೊ ಬೆಂಡಿಗೇರಿ, ರಾಮಣ್ಣ ಪಾಲೇಕರ, ಮೌನೇಶ್ವರ ಕೊರವರ, ಶಕುಂತಲಾ ತಳವಾರ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಪ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News