×
Ad

ಬಲ್ಯದಲ್ಲಿ ಸೋಲಾರ್ ದೀಪ ಕಳವು

Update: 2017-06-13 17:37 IST

ಕಡಬ, ಜೂ.13: ಇಲ್ಲಿಗೆ ಸಮೀಪದ ಬಲ್ಯ ಗ್ರಾಮದ ಗೋವಿಂದಕಟ್ಟೆಯಲ್ಲಿ ಪಂಚಾಯತ್ ವತಿಯಿಂದ ಅಳವಡಿಸಲಾಗಿದ್ದ ಸೋಲಾರ್ ದೀಪದ ಪ್ಯಾನೆಲ್‌ಗಳನ್ನು ಕಿಡಿಗೇಡಿಗಳು ಸೋಮವಾರ ಕಳವುಗೈದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಕುಟ್ರುಪ್ಪಾಡಿ ಗ್ರಾ.ಪಂ. ಹಾಗೂ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೇ ಭಾಗದಲ್ಲಿ ಈ ಹಿಂದೆ ಕಳ್ಳರು ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಈ ಬಾರಿ ಮತ್ತೆ ಕಳವಾಗಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಗ್ರಾಮಸ್ಥರಾದ ಶಿಜೋ ಜಾರ್ಜ್, ಜೋಯಲ್, ಭರತ್ ಪಟ್ಟೆ, ಪ್ರಿನ್ಸ್, ಎಲ್ದೋಸ್, ಪ್ರಸನ್ನ, ಹಾಗೂ ಲಿಜೋ ರವರು ಕುಟ್ರುಪ್ಪಾಡಿ ಗ್ರಾ.ಪಂ.ನ ಅಧ್ಯಕ್ಷರು ಹಾಗೂ ಪಿಡಿಒಗೆ ಹಾಗೂ ಕಡಬ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದು, ಸಮಾಜಕ್ಕೆ ಧಕ್ಕೆ ತರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News