ಮಣಿಪಾಲ ವಿ.ವಿ.ಯಿಂದ ಆರೋಗ್ಯ ಕಾರ್ಡಿನ ಸದಸ್ಯತ್ವ ಅಭಿಯಾನ
ಬೆಳ್ತಂಗಡಿ: ಸಾಮಾನ್ಯ ಜನತೆಗೂ ಕಡಿಮೆ ವೆಚ್ಚದ ಚಿಕಿತ್ಸಾ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶವನ್ನು ಹೊಂದಿರುವ ಮಣಿಪಾಲ ವಿಶ್ವವಿದ್ಯಾನಿಲಯ ದ ಒಂದು ಸಾಮಾಜಿಕ ಬದ್ದತೆಯ ಪರಿಕ್ರಮವಾಗಿರುವ ಆರೋಗ್ಯ ಕಾರ್ಡಿನ ಸದಸ್ಯತ್ವ ಅಭಿಯಾನ ಜುಲೈ 31, 2017 ರಂದು ಕೊನೆಗೊಳ್ಳಲಿದೆ ಆರೋಗ್ಯ ಕಾರ್ಡ್‌ನೊಂದಿಗೆ ದಂತ ಕಾರ್ಡ್ ಉಚಿತ ಇದೆ ಎಂದು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಅಪರೇಶನ್ಸ್ ವಿಭಾಗದ ಸೀನಿಯರ್ ರವಿರಾಜ್ ತಿಳಿಸಿದ್ದಾರೆ.
ಅವರು ಮಂಗಳವಾರ ಸಂತೆಕಟ್ಟೆ ಸುವರ್ಣ ಆರ್ಕೇಡ್ನ ಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಯೋಜನೆಯು ಕರಾವಳಿ ಕರ್ನಾಟಕದಲ್ಲಿನ ಮಣಿಪಾಲ ಸಮೂಹದ ಎಲ್ಲಾ ಆಸ್ಪತ್ರೆಗಳಿಗೆ ಅನ್ವಯವಾಗುತ್ತದೆ. ಕಳೆದ ವರ್ಷ ಈ ಯೋಜನೆಗೆ 1.65 ಲಕ್ಷ ಮಂದಿ ಸದಸ್ಯರಾಗಿದ್ದು, ಈ ಯೋಜನೆಯ ಜನಪ್ರಿಯತೆಯನ್ನು ಸೂಚಿಸುತ್ತದೆ ಹಾಗೂ 2017ರ ವರ್ಷಕ್ಕೆ 2 ಲಕ್ಷ ಸದಸ್ಯರ ಗುರಿಯನ್ನು ಹೊಂದಿದೆ ಎಂದರು.
ಈಗಾಗಲೇ ಈ ಯೋಜನೆಯು ಆರಂಭಗೊಂಡಾಗಿನಿಂದ ಸುಮಾರು 1 ಲಕ್ಷ ಜನರು ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿಯ ಕಾರ್ಡ್‌ಗೆ ಕೇವಲ 250 ರೂಪಾಯಿಗಳು ಮತ್ತು ಕೌಟುಂಬಿಕ ಕಾರ್ಡ್‌ಗೆ 520 ರೂಪಾಯಿಗಳು ಆಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 8971957575 / 7259446888 ಈ ನಂಬರ್‌ನ್ನು ಸಂಪರ್ಕಿಸಬಹುದು ಎಂದರು. ಗೋಷ್ಠಿಯಲ್ಲಿ ಬೆಳ್ತಂಗಡಿ ಟೈಲರ್ಸ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್, ಕೆ.ಎಂ.ಸಿ. ಆಸ್ಪತ್ರೆಯ ಕ್ರೆಡಿಟ್ ಬ್ಯುಸಿನೆಸ್ಸ್ ವಿಭಾಗದ ಉಪ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ಕೆ, ಕೆಎಂಸಿ ಆಸ್ಪತ್ರೆಯ ಮಾಧ್ಯಮ ಸಲಹೆಗಾರ ಹರ್ಬಟ್ ಉಪಸ್ಥಿತರಿದ್ದರು.