ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ
ಚಿಕ್ಕಮಗಳೂರು, ಜೂ.13: ಒಂದು ನೋಟ್ ಬುಕ್ ವಿತರಿಸಿದರೆ ಅದರಿಂದ ಜೀವನ ಬದಲಾಗೋಲ್ಲ. ಆದರೆ ನೀವು ಮಾನಸಿಕವಾಗಿ ಯೋಚನೆ ಮಾಡೋದು ಬದಲಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಮಂಗಳವಾರ ನಗರದ ಶಂಕರಪುರ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಯುವಶಕ್ತಿ ಮಾನವತಾ ವೇದಿಕೆಯಿಂದ 6ನೇ ವರ್ಷದ ಅಶಕ್ತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾಂರ್ುಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಒಂದು ಸಂಸ್ಥೆ ನೋಟ್‌ಬುಕ್ ವಿತರಣೆ ಮಾಡುತ್ತಿದೆ ಎಂದರೆ ವಿದ್ಯಾರ್ಥಿಗಳು ಅದನ್ನು ತಿಳಿದುಕೊಂಡು 5 ಗಂಟೆ ಓದಿದರೆ ಸಾಲದು. ಇನ್ನು ಒಂದು ಗಂಟೆ ಹೆಚ್ಚಿಗೆ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿದರೆ ಅವರು ವಿತರಿಸಿದ್ದಕ್ಕೂ ಒಂದು ಗೌರವವಿರುತ್ತದೆ ಎಂದು ತಿಳಿಸಿದರು.
ಬದುಕಿನಲ್ಲಿ ಮುಂದೆ ಬರಬೇಕಾದರೆ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರ ಕೆಲವು ಮಾತುಗಳನ್ನು ಸ್ಮರಿಸಿದಅವರು, ಕೆಲವು ಖಾಸಗೀ ಕ್ವಾನೆಂಟ್‌ಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಸುತ್ತಾರೆ. ಅವರು ಎ.ಸಿ. ಬಸ್‌ನಲ್ಲಿ ಪ್ರಯಾಣ, ಮಕ್ಕಳಿಗೂ ಚುರು ಬೆವರು ಬಂದರೂ ತೊಂದರೆಪಡುತ್ತಾರೆ ಪೋಷಕರು. ಆದರೆ ಹಳ್ಳಿಯಿಂದ, ಪಟ್ಟಣದಿಂದ ಬರುವ ಸರಕಾರಿ ಶಾಲೆ ಮಕ್ಕಳು, ತಂದೆ-ತಾಯಿಗಳ ಸಣ್ಣಪುಟ್ಟ ಕೆಲಸ ಮುಗಿಸಿಕೊಂಡು ಬರುತ್ತಾರೆ, ಸರಕಾರಿ ಶಾಲೆಯಲ್ಲಿ ಸಿಗುವ ನಾಯಕತ್ವದ ಗುಣ ಕ್ವಾನೆಂಟ್ ಶಾಲೆಗಳಲ್ಲಿರುವುದಿಲ್ಲ ಎಂದು ಹೇಳಿದರು.
ಯುವಶಕ್ತಿ ಮಾನವತಾ ವೇದಿಕೆಯ ಅಧ್ಯಕ್ಷ ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ಶ್ರಮಪಟ್ಟು ಕಲಿತು ದೇಶಕ್ಕೆ ಒಳ್ಳೆಯ ಹೆಸರನ್ನು ತರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್, ಶಾಲೆಯ ಪ್ರಾಂಶುಪಾಲ ಉಮಾ ಮಹೇಶ್ವರಪ್ಪ, ಸಹ ಶಿಕ್ಷಕ ನೀಲಕಂಠಪ್ಪ, ಶಿಕ್ಷಕಿ ಭಾನುಮತಿ, ವೇದಿಕೆಯ ಉಪಾಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವಸೀಲ್, ಸದಸ್ಯರಾದ ಬಾಂಡ್ ಪ್ರಸನ್ನ, ಮಂಜುನಾಥ್, ಪ್ರಸನ್ನ, ಶಿವು, ಮಂಜುನಾಥ್ ಬೈಪಾಸ್, ಧನಂಜಯ, ಮೋಹನ ರಾಂಪುರ ಮತ್ತಿತರರಿದ್ದರು.