×
Ad

ಹನೂರು: ನರೇಗಾ ಯೋಜನೆಯಡಿ ಹಲವು ಕಾಮಗಾರಿ

Update: 2017-06-14 20:48 IST

 ಹನೂರು, ಜೂ. 14:  2017-18  ಅವಧಿಯಲ್ಲಿ 75 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು 21 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಾಲ್ಲೂಕು ಸಂಯೋಜಕ ಮನೋಹರ್‌ ಮಾಹಿತಿ ನೀಡಿದರು.

ಕ್ಷೇತ್ರ್ರ ವ್ಯಾಪಿಯ ದೂಡ್ಡಲ್ಲಾತುರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಎರಡನೇ ಸುತ್ತಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ  ಸಭೆಯಲ್ಲಿ ಮಾತನಾಡಿದ ಮನೋಹರ್‌ ನರೇಗಾ ಯೋಜನೆಯಡಿ ಉದ್ಯೋಗ ಕೇಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಯೋಜನೆಯಡಿ ಉದ್ಯೋಗ ಪಡೆದ ಪ್ರತಿಯೊಬ್ಬರಿಗೂ ಪ್ರತಿದಿನ ರೂ. 224 ದಿನಗೂಲಿ ನೀಡಲಾಗುತ್ತಿದೆ. ಒಂದೊಮ್ಮೆಗ್ರಾಮಸ್ಥರು ಉದ್ಯೋಗ ಕೇಳಿಯೂ ಪಂಚಾಯಿತಿ ವತಿಯಿಂದ ಉದ್ಯೋಗ ನೀಡಲಾಗದಿದ್ದ ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆ ನೀಡಲಾಗುವುದು. ಆದುದರಿಂದ ಪ್ರತಿಯೊಬ್ಬರೂ ಉದ್ಯೋಗ ಚೀಟಿಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜಾಬ್‌ಕಾರ್ಡ್ ಪಡೆಯದೇ ಇದ್ದವರು ಹೊಸದಾಗಿ ಜಾಬ್‌ಕಾರ್ಡ್ ಪಡೆಯಲು ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು ಆಧಾರ್‌ಕಾರ್ಡ್ ಸಮೇತ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
   ನರೇಗಾ ಯೋಜನೆಯಡಿ ಏಪ್ರಿಲ್ ನಿಂದ ಸೆಪ್ಟೆಂಬರ್‌ವರೆಗಿನ 6 ತಿಂಗಳ ಅವಧಿಯಲ್ಲಿ 75 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 21,73,234 ಲಕ್ಷ ಖರ್ಚು ಮಾಡಲಾಗಿದ್ದು14,12,320 ಲಕ್ಷ ರೂ. ಕೂಲಿ ಪಾವತಿಮಾಡಲಾಗಿದ್ದು ಸಾಮಗ್ರಿಗಳಿಗಾಗಿ 7,60,914 ಲಕ್ಷ ಖರ್ಚು ಮಾಡಲಾಗಿದೆ. ಈ ಸಂಬಂಧ 5 ಜನರ ಪರಿಶೊಧಕರ ತಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೂ ತೆರಳಿ ಕಾಮಗಾರಿಗಳ ಲೋಪದೋಷ ಮತ್ತು ಅಹವಾಲುಗಳು ಹಾಗೂ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೋಜನೆಯಲ್ಲಿ ಒಟ್ಟು 494 ಉದ್ಯೋಗ ಚೀಟಿಗಳನ್ನು ಕುಟುಂಬಗಳಿಗೆ ವಿತರಣೆ ಆಗಿದೆ ಎಂದು ತಿಳಿಸಿದರು. ಚಾಮರಾಜನಗರ ಜಿಲ್ಲೆ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣದನ್ವಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್‌ಕಾರ್ಡ್ ಉಳ್ಳ ವ್ಯಕ್ತಿಗೆ ಹಿಂದೆ 100 ದಿನಗಳ ಉದ್ಯೋಗ ನೀಡಬೇಕೆಂದು 2008 ರಿಂದಲೂ ಸಹ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನದಲ್ಲಿದೆ.

ಬರಗಾಲ ಘೋಷಣೆಯಾದ ನಂತರ ಈ ವರ್ಷದಲ್ಲಿ ಪ್ರತಿ ಕೂಲಿಕಾರ್ಮಿಕರಿಗೆ 50 ದಿನಗಳ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಯೋಜನೆಯನ್ನು ಸರ್ಕಾರ ನೀಡಿದೆ ಎಂದರು.

ಗ್ರಾಮಸ್ಥರಿಂದ ದೂರು: ಇದೇ ವೇಳೆ ಗ್ರಾ.ಪಂ ವ್ಯಾಪ್ತಿಯಡಿ ಹಲವಾರು ಮಹಿಳೆಯರು ನಮ್ಮ ಗ್ರಾಮದಲ್ಲಿ ಪಂಚಾಯತ್ ಇದ್ದರೂ ಕೂಡ ನಮ್ಮ ಗ್ರಾಮಸ್ಥರು 3 ಕಿಮೀ ದೂರದಿಂದ ಸರ್ಕಾರದಿಂದ ದೂರೆಯುವ ಸೀಮೆಎಣ್ಣೆ ಹಾಗೂ ರೇಷನ್‌ ಪಡೆಯಲು  ನಮಗೆ ತುಂಬಾ ಕಷ್ಟವಾಗುತ್ತದೆ ಇದನ್ನ ನಮ್ಮ ಗ್ರಾಮದಲ್ಲಿ ದೂರಕಿಸಿಕೊಡುವುದಕ್ಕೆ ವ್ಯವಸ್ಥೆಮಾಡಿ ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ನೀಲಮ್ಮ ಉಪಾದಕ್ಷ್ಯ ಗವಿತಿಮ್ಮ ಗ್ರಾ.ಪಂ  ಪಿಡಿಒ ಮಹದೇವಪ್ರಸಾದ್ ದಾಸಪ್ಪ ಪಳನಿಸ್ವಾಮಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News