×
Ad

ವ್ಯಂಗ್ಯ ಚಿತ್ರ: ಜಮಾಅತ್ ಮುಸ್ಲಿಂ ಸಂಘಟನೆಗಳಿಂದ ದೂರು

Update: 2017-06-15 17:37 IST

ಹೊನ್ನಾವರ, ಜೂ.15: ಮಕ್ಕಾ, ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯವಾಗಿ ಫೇಸ್‌ಬುಕ್ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಂಘಟನೆಗಳು ಹೊನ್ನಾವರ ಠಾಣೆಗೆ ಜಮಾಯಿಸಿ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಹೊನ್ನಾವರ ಜಮಾಅತ್ ನ ಅಧ್ಯಕ್ಷ ಅಝಾದ್ ಅಣ್ಣೀಗೇರಿ ಮಾತನಾಡಿ ಹೊನ್ನಾವರ ಜೈವಂತ ನಾಯ್ಕ ಎಂಬಾತ ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯ ಚಿತ್ರ ಹರಿಬಿಟ್ಟಿದ್ದಾನೆ. ಮುಸ್ಲಿಂ ಬಾಂಧವರಿಗೆ ನೋವನ್ನುಂಟು ಮಾಡಿದೆ. ಇದು ಸಮಾಜದ ಶಾಂತಿಯನ್ನು ಕಿಡಿಸುವಲ್ಲಿ ಪ್ರೇರೇಪಿಸುವ ಕೃತ್ಯವೆಸಗಿದ್ದಾನೆ. ಆರೋಪಿ ಜೈವಂತ ನಾಯ್ಕನನ್ನು ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News