ರೈತ ಆತ್ಮಹತ್ಯೆ
Update: 2017-06-15 18:25 IST
ಮದ್ದೂರು, ಜೂ.15: ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಿಂಗೇಗೌಡ (60) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ನಾಲ್ಕು ಎಕರೆ ಜಮೀನಿನಲ್ಲಿ ಭತ್ತ, ರಾಗಿ, ಕಬ್ಬು ಬೆಳೆ ಬೇಸಾಯ ಮಾಡಿದ್ದು, ಮಳೆಯಿಲ್ಲದೆ ಬೆಳೆ ನಾಶವಾಗಿತ್ತು ಎನ್ನಲಾಗಿದೆ.
ನಿಂಗೇಗೌಡ ಬೇಸಾಯಕ್ಕಾಗಿ ಕೊಪ್ಪದ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಚಿನ್ನಾಭರಣ ಸಾಲ, ಗಿರವಿ ಅಂಗಡಿಯಲ್ಲಿ 75 ಸಾವಿರ ರೂ. ವಡವೆ ಸಾಲ ಹಾಗೂ ಲೇವಾದಾರರಿಂದ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿದರು. ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.