ಅಂಬೇಡ್ಕರ್ ಭಾವಚಿತ್ರಕ್ಕೆ ಶೂ ಧರಿಸಿ ಮಾಲಾರ್ಪಣೆ
Update: 2017-06-15 22:27 IST
ಮಂಡ್ಯ, ಜೂ.15: ಅಂಬೇಡ್ಕರ್ ಮತ್ತು ಜಗಜೀವನರಾಂ ಭಾವಚಿತ್ರಗಳಿಗೆ ಶೂ ಧರಿಸಿ ಮಾಲಾರ್ಪಣೆ ಮಾಡುವ ಮೂಲಕ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿವಾದಕ್ಕೆ ಸಿಲುಕಿದ್ದಾರೆ.
ಮದ್ದೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ದಲಿತ ಕಾಲನಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದಲಿತರ ಮನೆಯಲ್ಲಿ ಹೊಟೆಲ್ ಊಟ ತರಿಸಿಕೊಂಡು ಮಾಡಿದರೆಂಬ ವಿವಾದ ತಣ್ಣಗಾಗುವ ಮುನ್ನವೇ ಯಡಿಯೂರಪ್ಪ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈಗಾಗಲೇ ದಲಿತರ ಮನೆಯಲ್ಲಿ ಊಟದ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೊಸ ವಿವಾದ ಮತ್ತಷ್ಟು ಅಸಮಾಧಾನ ತೀವ್ರಗೊಳ್ಳಲು ನಾಂದಿ ಹಾಡಿದೆ.
ಯಡಿಯೂರಪ್ಪ ಕೊತ್ತನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮದ ಅಂಬೇಡ್ಕರ್, ಬಾಬು ಜಗಜೀವನರಾಂ ಭಾವಚಿತ್ರಗಳಿಗೆ ಶೂ ಧರಿಸಿಕೊಂಡೇ ಮಾಲಾರ್ಪಣೆ ಮಾಡಿದಾಗ ಹಲವು ದಲಿತರು ಆಕ್ಷೇಪ ವ್ಯಕ್ತಪಡಿಸಿದರು.