×
Ad

ಯುವ ಜನರು ಸಮಾಜ ಮುಖಿಯಾಗಿ ಆಲೋಚಿಸಬೇಕು: ಡಿ.ವೈ.ಎಫ್.ಐ. ಪೃಥ್ವಿ

Update: 2017-06-16 15:51 IST

ಸಕಲೇಶಪುರ,ಜೂ.16: ಯುವ ಜನರು ಸಮಾಜ ಮುಖಿಯಾಗಿ ಆಲೋಚಿಸಬೇಕು. ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅವುಗಳ ಪರಿಹಾರಕ್ಕಾಗಿ ಐಕ್ಯ ಹೋರಟಗಳನ್ನು ರೂಢಿಸಬೇಕು ಎಂದು ಡಿ.ವೈ.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಹೇಳಿದರು.
 
ತಾಲ್ಲೂಕಿನ ಒಸ್ಸೂರು ಘಟಕ ಸಮ್ಮೇಳನದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಯಾವುದೇ ಜಾತಿವಾದಿ ಮತೀಯ ವಾದಿ ಶಕ್ತಿಗಳ ರಾಜಕೀಯ ಕೈಗೊಂಬೆಗಳಾಗಿ ಬಳಕೆಯಾಗಬಾರದು ಎಂದರು. ಹುಸಿ ದೇಶ ಭಕ್ತಿಯ ಹೆಸರಿನಲ್ಲಿ ಯುವಜನರನ್ನು ಅಡ್ಡದಾರಿಗೆ ಎಳೆಯುತಿದ್ದಾರೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಭಾರತ ಪ್ರಜಾಸತ್ತಾತ್ಮಕ ಯುವಜನ ಫಡರೇಶನ (ಡಿ.ವೈ.ಎಫ್.ಐ.) ಮೂಲ ಭೂತ ಸೌಕರ್ಯ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಗಾಗಿ ಹೋರಾಟನಡೆಸುತ್ತಿದೆ ಎಂದು ಸಿ.ಐ.ಟಿ.ಯು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ. ಹರೀಶ್ ತಿಳಿಸಿರು.


ಸಮ್ಮೇಳನದಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ. ಮನೆ ನಿವೇಶನ ಮೂಲ ಸೌಕರ್ಯಗಳಿಗಾಗಿ ಹೋರಾಟ ರೂಪಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಒಸ್ಸೂರು ಡಿ.ವೈ.ಎಫ್.ಐ ನ ಘಟಕ ರಚನೆಯಾಗಿ ನೂತನ ಘಟಕದ ಅಧ್ಯಕ್ಷರಾಗಿ ಸಿ.ರಮೇಶ್, ಕಾರ್ಯದರ್ಶಿಯಾಗಿ ಜೆ.ಮಂಜು ಖಜಾಂಚಿಯಾಗಿ ಟಿ.ಸಿ.ಮಂಜು ಮತ್ತು ಮೋಹನ್ ಎಂ.ಎನ್.ಪ್ರಕಾಶ್, ಚಂದ್ರ ಶೇಖರ್, ಸಿ.ವಿಜಂ ಪಧಾಧಿಕಾರಿಗಳಾಗಿ ಆಯ್ಕೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News