×
Ad

ಸಾಲದ ಶೂಲಕ್ಕೆ ಅನ್ನದಾತರ ಬಲಿ

Update: 2017-06-16 15:56 IST

ಹಾಸನ,ಜೂ.16: ಕಳೆದ ಸತತ ಮೂರು ವರ್ಷಗಳ ಮಳೆಯ ವೈಫಲ್ಯ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣವನ್ನು ಹೆಚ್ಚಿಸಿದ್ದು, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರಾಜ್ಯದಲ್ಲೇ ಉತ್ತಮ ನೀರಾವರಿ ಸೌಲಭ್ಯವನ್ನು ಹೊಂದಿರುವ ಹಾಸನ, ಮಂಡ್ಯ ಜಿಲ್ಲೆಗಳಲ್ಲೇ ಅತಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ.ಎಂದು ವರದಿಗಳು ಹೇಳುತ್ತಿವೆ.

ಇದು ಆತಂಕ ಮೂಡಿಸುವ ವಿಷಯವಾಗಿದ್ದು, ರೈತರ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಅಧೋಗತಿಗೆ ಇಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ಅಂಕಿ ಅಂಶಗಳ ಪ್ರಕಾರ ಹಾಸನ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 127 ಅನ್ನದಾತರು ಸಾಲಕ್ಕೆ ಹೆದರಿ ಜೀವ ತೆತ್ತಿದ್ದಾರೆ. 2014-15 ರಲ್ಲಿ 2 ರೈತರು ಸಾವಿನ ಮನೆ ಸೇರಿದ್ದರೆ, 2015-16 ರಲ್ಲಿ 61 ರೈತರು ಪ್ರಾಣ ಬಿಟ್ಟಿದ್ದಾರೆ. 2016-17 ರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದ್ದು 64 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  2016 ರಲ್ಲಿ ಆಲೂರಿನಲ್ಲಿ 1, ಅರಕಲಗೂಡಿನಲ್ಲಿ 6, ಚನ್ನರಾಯಪಟ್ಟಣ 12, ಹಾಸನ 15, ಹೊಳೆನರಸೀಪುರ 9 ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ 6 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ 2017 ರಲ್ಲೂ ಕೂಡ ಕೆಲ ರೈತರ ಹತ್ಮಹತ್ಯೆ ಪ್ರಕರಣಗಳು ನಡೆದಿವೆ. ಇದಕ್ಕೆಲ್ಲ ಪ್ರಮುಖ ಕಾರಣ ಕಳೆದ ಮೂರು ವರ್ಷಗಳಲ್ಲಿ ಕಂಡುಬಂದ ಮಳೆಯ ಕೊರತೆಯಲ್ಲದೇ ಮತ್ತೇನೂ ಅಲ್ಲ.

ಹಾಸನ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕುವಾರು ರೈತರು ಬೆಳೆಯುವ ಭಿನ್ನವಾಗಿದೆ. ಚನ್ನರಾಯಪಟ್ಟಣದಲ್ಲಿ ತೆಂಗು, ಕಬ್ಬು ಬೆಳೆದರೆ ಸಕಲೇಶಪುರದಲ್ಲಿ ಕಾಫಿ, ಸಾಂಬಾರ ಪದಾರ್ಥಗಳು ಹಾಗೂ ಭತ್ತ ಹೆಚ್ಚಾಗಿ ಬೆಳೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News