ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮುಂಗಾರು ಮಳೆ
ಶಿವಮೊಗ್ಗ, ಜೂ. 16: ಕಳೆದ ಮೂರು ದಿನಗಳಿಂದ ಮಲೆನಾಡು ವ್ಯಾಪ್ತಿಯಲ್ಲಿ ದುರ್ಬಲಗೊಂಡಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಶುಕ್ರವಾರ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಬೆಳಿಗ್ಗೆ ಶಿವಮೊಗ್ಗ ನಗರವು ಧಾರಾಕಾರ ವರ್ಷಧಾರೆಗೆ ಸಾಕ್ಷಿಯಾಯಿತು.
ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಶಿವಮೊಗ್ಗದಲ್ಲಿ 7.4 ಮಿ.ಮೀ., ತೀರ್ಥಹಳ್ಳಿ 34.8 ಮಿ.ಮೀ., ತೀರ್ಥಹಳ್ಳೀ 34.8 ಮಿ.ಮೀ., ಸಾಗರ 10.8 ಮಿ.ಮೀ., ಸೊರಬ 0.4 ಮಿ.ಮೀ., ಹೊಸನಗರ ತಾಲೂಕಿನಲ್ಲಿ 31.2 ಮಿ.ಮೀ., ಶಿಕಾರಿಪುರದಲ್ಲಿ 0.00, ಭದ್ರಾವತಿಯಲ್ಲಿ 0.00 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಭದ್ರಾ ಡ್ಯಾಂ ವ್ಯಾಪ್ತಿಯಲ್ಲಿ 12.4 ಮಿ.ಮೀ., ಆಗುಂಬೆ 54.4 ಮಿ.ಮೀ., ಲಿಂಗನಮಕ್ಕಿ 26 ಮಿ.ಮೀ., ಮಾಣಿಯಲ್ಲಿ 34 ಮಿ.ಮೀ., ಯಡೂರು 52 ಮಿ.ಮೀ., ಹುಲಿಕಲ್ 42 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 38 ಮಿ.ಮೀ. ಮಳೆಯಾಗಿದೆ.
ಡ್ಯಾಂಗಳ ವಿವರ: ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನಲ್ಲಿ 1746.25 (ಗರಿಷ್ಠ ಮಟ್ಟ : 1819) ಅಡಿ ನೀರು ಸಂಗ್ರಹವಾಗಿದೆ. 670 ಕ್ಯೂಸೆಕ್ ಒಳಹರಿವಿದ್ದು, 2373 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಭದ್ರಾ ಡ್ಯಾಂನ ನೀರಿನ ಮಟ್ಟ 106 ಅಡಿಯಿದೆ. 5442 ಕ್ಯೂಸೆಕ್ ಒಳಹರಿವಿದ್ದು, 130 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಜಲಾಶಯದ ನೀರಿನ ಮಟ್ಟ 587.96 (ಗರಿಷ್ಠ ಮಟ್ಟ : 588.24) ಅಡಿಯಿದೆ. 2086 ಕ್ಯೂಸೆಕ್ ಒಳಹರಿವಿದ್ದು, 1854 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.