ಅಕ್ರಮ ಅಂಗಡಿಗಳಿಗೆ ಅಧಿಕಾರಿಗಳ ದಾಳಿ

Update: 2017-06-16 11:59 GMT

ಸೊರಬ, ಜೂ.16: ಲಲಿತಾ ಹನುಮಂತಪ್ಪರಿಗೆ  ಸೇರಿದ ಎನ್ನಲಾದ ನಿವೇಶನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದ ಮಳಿಗೆಗಳಿಗೆ ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್ ಎಸ್.ಎಸಿ.ಎಸ್.ಟಿ ಆಯೋಗದ ಆದೇಶದಂತೆ ಮಳಿಗೆಗಳಿಗೆ ಬೀಗ ಹಾಕಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ಹಿರೇಶಕುನ ಗ್ರಾಮದ ಸರ್ವೆ ನಂ.1/5ರಲ್ಲಿ ಲಲಿತಾ ಹನುಮಂತಪ್ಪ ಅವರಿಗೆ ಸೇರಿದ ನಿವೇಶನದಲ್ಲಿ ಜೆ.ಡಿ.ಯುವರಾಜ್ ಅವರು ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿರುವ ಬಗ್ಗೆ ಲಲಿತಾ ಹನುಮಂತಪ್ಪ ಅವರು ನ್ಯಾಯಾಲದ ಮೊರೆ ಹೋಗಿದ್ದರು ಜೊತೆಗೆ ಸೂಕ್ತ ರಕ್ಷಣೆ ನೀಡುವಂತೆ  ಎಸ್.ಎಸಿ.ಎಸ್.ಟಿ ಆಯೋಗಕ್ಕೂ ಮನವಿ ಸಲ್ಲಿಸಿದ್ದರು.

ದೂರುದಾರರ ಮನವಿಯನ್ನು ಪರಿಶೀಲಿಸಿದ ಆಯೋಗ ನ್ಯಾಯಾಲಯದ ಅಂತಿಮ ತೀರ್ಪು ನೀಡುವವರೆಗೂ ತಹಶೀಲ್ದಾರ್ ಅವರ ಸುಪರ್ದಿಗೆ ಪಡೆಯುವಂತೆ ಸೂಚಿಸಿದ ಮೇರೆಗೆ ತಹಶೀಲ್ದಾರ್‌ ನಾಲ್ಕು ಮಳಿಗೆಗಳ ಪೈಕಿ ಜೆ.ಡಿ.ಯುವರಾಜ್ ಅವರು ನಡೆಸುತ್ತಿರುವ ಕ್ಯಾಂಟೀನ್ ಮಳಿಗೆಯನ್ನು ಹೊರತುಪಡಿಸಿ  ಉಳಿದ ಮೂರು ಮಳಿಗೆಗಳಿಗೆ ಬೀಗ ಹಾಕಿ ತಮ್ಮ ವಶಕ್ಕೆ ತೆಗೆದುಕೊಂಡರು.

ಇನ್ನೊಂದು ಮಳಿಗೆಯನ್ನು ತಕ್ಷಣ ಖಾಲಿ ಮಾಡುವಂತೆ ಸ್ಥಳದಲ್ಲಿಯೆ ಸೂಚಿಸಿದರು. ನಮ್ಮಜಾಗದಲ್ಲಿ ದಬ್ಬಾಳಿಕೆಯಿಂದ ಅಕ್ರಮವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆವು. ಎಸ್‌ಸಿ ಎಸ್ಟಿ ಆಯೋಗಕ್ಕೂ ದೂರು ನೀಡಿದ್ದೆವು.  
ನಮ್ಮ ದೂರನ್ನು ಪರಿಶೀಲಿಸಿ ಆಯೋಗವು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗುವವರೆಗೂ ಮಳಿಗೆಗಳಿಗೆ ಬೀಗ ಹಾಕಲು ತಹಶೀಲ್ದಾರ್ ಅವರಿಗೆ ಸೂಚಿಸಿರುವುದು ನಮಗೆ ಸಂತೋಷ ತಂದಿದೆ. ಇಷ್ಟೆಲ್ಲಾ ಬೆಳವಣಿಗೆಗಳಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಕಾರಣರಾಗಿದ್ದು, ಮುಂದೆ ನ್ಯಾಯಾಲಯದಲ್ಲೂ ನ್ಯಾಯ ಸಿಗುವ ಭರವಸೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News