ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ಕುರಿತ ಜಾಗೃತಿ ಶಿಬಿರ
ಚಿಕ್ಕಮಗಳೂರು, ಜೂ.16: ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ಪರಿಕಲ್ಪನೆಯೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪದ್ಧತಿ. ಜು.1ರಿಂದ ಜಾರಿಗೆ ಬರುವ ಸಿದ್ಧತೆಗಳಾಗುತ್ತಿವೆ ಎಂದು ಬೆಂಗಳೂರು ಮತ್ತು ಗೋವಾ ವಾಣಿಜ್ಯತೆರಿಗೆ ಇ-ಅಡಿಟ್ ವಿಭಾಗದ ಜಂಟಿ ಆಯುಕ್ತ ಕೆ.ಎಸ್.ಬಸವರಾಜ್ ಅಭಿಪ್ರಾಯಿಸಿದರು.
ಅವರು ಶುಕ್ರವಾರ ಚಿಕ್ಕಮಗಳೂರು ರೋಟರಿ ಕ್ಲಬ್‌ಘಟಕ ಎಫ್‌ಕೆಸಿಸಿಐ ಮತ್ತು ವಾಣಿಜ್ಯ ತೆರಿಗೆಇಲಾಖೆ ಸಹಯೋಗದೊಂದಿಗೆ ನಗರದ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ಕುರಿತ ಜಾಗೃತಿ ಶಿಬಿರದಲ್ಲಿ ಮಾತನಾಡಿದರು. ವ್ಯಾಪಾರಸ್ಥರೆಲ್ಲರೂ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದು ಸೂಕ್ತ. ಆದರೆ 20ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸುವವರಿಗೆ ಇಲ್ಲಿ ವಿನಾಯಿತಿ ಇದೆ.
ಕರ್ನಾಟಕ ರಾಜ್ಯದಲ್ಲಿ ಶೇ.92ರಷ್ಟು ವ್ಯಾಪಾರಿಗಳು, ಉತ್ಪಾದಕರು, ಸೇವಾನಿರತರು ಜಿಎಸ್‌ಟಿ ಅನ್ವಯ ಪ್ರಾಥಮಿಕ ನೊಂದಾಣಿಗೊಂಡಿದ್ದರೂ ಅದರಲ್ಲಿ ಶೇ.45ರಷ್ಟು ಜನ ಮಾತ್ರ ಪೂರ್ಣಮಾಹಿತಿ ನೀಡಿದ್ದರೆ ಉಳಿದವರು ಇನ್ನೂ ಹೊಸಪದ್ಧತಿಯಿಂದ ಹೊರಗುಳಿದಿದ್ದಾರೆ. ನೊಂದಾವಣೆಗೊಂಡವರಿಗೆ ಅವರು ನೀಡಿರುವ ಇ-ಮೇಲ್ ಐಡಿಗೆ ಇನ್ನುಮುಂದೆ ಇಲಾಖೆಯ ಎಲ್ಲ ರೀತಿಯ ತಿಳುವಳಿಕೆ ಮತ್ತು ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ನೂತನ ತೆರಿಗೆಪದ್ಧತಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವುದರಿಂದ ನೊಂದವಣಿ ಸಂಖ್ಯೆ ಬರುವುದು ಸೇರಿದಂತೆ ನಿರೀಕ್ಷಿಸದ ತೊಂದರೆಗಳು ಸಹಜವಾಗಿ ಎದುರಿಸಬೇಕಾಗುವುದು. ವ್ಯಾಟ್‌ನಲ್ಲಿ ನೊಂದಾವಣೆ ಇರುವವರು ಜಿಎಸ್‌ಟಿಯಲ್ಲೂ ನೊಂದಾವಣೆ ಕಡ್ಡಾಯ. ಜುಲೈ1ರಿಂದ ಜಿಎಸ್‌ಟಿ ಅನ್ವಯ ಕಾರ್ಯ ಚಟುವಟಿಕೆಗಳು ನಡೆಯಲಿವೆ. ಮಾಹಿತಿ ಪೂರ್ಣ ಸಲ್ಲಸದವರಿಗೆ ಕೊನೆಯ ಅವಕಾಶವಿದ್ದು, ಇದನ್ನು ಬಳಕೆ ಮಾಡಿಕೊಂಡು ಹೊಸತೆರಿಗೆ ಪದ್ಧತಿಯಲ್ಲಿ ಮುಂದುವರೆಯುವುದರಲ್ಲಿ ಲಾಭವಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಶಿವಮೊಗ್ಗವಿಭಾಗದ ಜಂಟಿಆಯುಕ್ತ ಚಲುವೆಗೌಡ ತುಳಿಸಿದಾಸ್, ವ್ಯಾಟ್ ಅಧಿಕಾರಿ ದಯಾನಂದ, ಸ್ಥಳಿಯವ ವಾಣಿಜ್ಯತೆರಿಗೆ ಅಧಿಕಾರಿ ಶಂಕರ್, ಪ್ರಕಾಶ್, ಪೂರ್ಣಿಮಾ, ಸುಧೀರ್, ಕಾರ್ಯದಶಿ ಎಂ.ಎನ್.ರಘುರಾಮ್, ಸಹಾಯಕಗೌರ್ನರ್ ಎಂ.ಆರ್.ಕಿರಣ್ ಮತ್ತು ಖಜಾಂಚಿ ಎಂ.ಎನ್. ರಾಕೇಶ್ ಮತ್ತಿತರರಿದ್ದರು.