ಅಂಧ ಮಕ್ಕಳ ಶಾಲೆಯಲ್ಲಿ ಇಫ್ತಾರ್ ಕೂಟ

Update: 2017-06-17 12:27 GMT

ಚಿಕ್ಕಮಗಳೂರು, ಜೂ.17: ಕರ್ನಾಟಕ ರಾಜ್ಯ ಹಝ್ರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯು ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ರಮಝಾನ್ ತಿಂಗಳ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು.
 ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್ ಖಾನ್ ಮಾತನಾಡಿ, ರಮಝಾನ್‌ನಂತಹ ಪ್ರವಿತ್ರ ತಿಂಗಳಲ್ಲಿ ದೇವರಿಗೆ ಇಷ್ಟವಾದಂತಹ ಕಾರ್ಯವನ್ನು ಮಾಡುವುದು ಅತಿ ಮುಖ್ಯ. ದೇವರಿಗೆ ಇಷ್ಟವಾದದ್ದು ಎಂದರೆ ದಿನವಿಡೀ ಉಪವಾಸ ಮಾಡಿ ತಾನು ಕಷ್ಟಪಟ್ಟು ದುಡಿದಂತಹ ದುಡಿಮೆಯಲ್ಲಿ ತನಗೆ ಅವಶ್ಯಕತೆ ಇದ್ದಷ್ಟು ಹಣವನ್ನು ಇಟ್ಟುಕೊಂಡು ಉಳಿದ ಹಣವನ್ನು ಬೇರೆಯವರ ಕಷ್ಟಕ್ಕೆ ಭಾಗಿಯಾಗುವುದರ ಮೂಲಕ ನೀಡಿದರೆ ಅಂತಹ ವ್ಯಕ್ತಿಯನ್ನು ದೇವರು ಮೆಚ್ಚುತ್ತಾನೆ ಎಂದು ಹೇಳಿದರು.

ಹಾಗಾಗಿ ನಾವು ಸಮಾಜದಲ್ಲಿ ದುರ್ಬಲರ ಹಾಗೂ ಬಡವರ ಏಳಿಗೆಗಾಗಿ ಶ್ರಮಿಸಬೇಕು. ಇದರ ಅಂಗವಾಗಿ ಈ ದಿನ ಈ ಅಂಧ ಮಕ್ಕಳ ಶಾಲೆಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿರುವುದಾಗಿ ತಿಳಿಸಿದರು.

ಈ ಸಂದರ್ಭ ವೇದಿಕೆಯ ಪದಾಧಿಕಾರಿಗಳಾದ ಮೌಸಿನ್, ನಗರ ಆದ್ಯಕ್ಷ ಅಬ್ದುಲ್ ರಹ್ಮಾನ್, ಸಜೀಲ್ ಶಾಹುಲ್, ಜಿಲ್ಲಾ ಉಪಾಧ್ಯಕ್ಷ ಮೋಸಿನ್ ಶರೀಫ್, ಶಿರಾಜ್ ಅಹಮದ್, ನಾಸಿರ್ ಮುತ್ತಿತರಿದ್ದರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News