ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ

Update: 2017-06-17 12:50 GMT

ಮೂಡಿಗೆರೆ,ಜೂ.17: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ 2017-18ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಪಸಂಖ್ಯಾತ ಜನರ ಆರ್ಥಿಕ ಅಭಿವೃಧ್ದಿ ಮತ್ತು ಸ್ವಯಂ ಉದ್ಯೋಗಕ್ಕೆ ವಿವಿಧ ಸಾಲ-ಸೌಲಭ್ಯ ಪಡೆಯಲು ಅರ್ಜಿ ಕರೆಯಲಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕ ತಿಪ್ಪೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಬಯಸುವವರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಫಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು. ನಿಗಮದಿಂದ ಈ ಹಿಂದೆ ಒಂದು ಬಾರಿ ಯಾವುದೇ ಯೋಜನೆಯಡಿಯಲ್ಲಿ ಸಾಲ-ಸೌಲಭ್ಯ ಪಡೆದಿದ್ದಲ್ಲಿ ಅಂತಹವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಹಾಗೂ ವಿಧವೆ, ಅಂಗವಿಕಲರಿಗೆ, ಮಾಜಿ ಸೈನಿಕರಿಗೆ ಶೇ. 3 ರಷ್ಟು ಮೀಸಲಾತಿ ಆದ್ಯತೆ ನೀಡಲಾಗುವುದು.  ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಹಾಗೂ ನಗರ ಪ್ರದೇಶದವರಿಗೆ ರೂ. 103000 ಮೀರಿರಬಾರದು. ಅರ್ಜಿದಾರರು ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ಅರ್ಜಿದಾರರು ತಮ್ಮ ವಿಳಾಸದ ದೃಡೀಕರಣಕ್ಕಾಗಿ ಆಧಾರ್ ಪ್ರತಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು.

ಸ್ವಯಂ ಉದ್ಯೋಗ ಜಿಲ್ಲೆಗೆ- ಭೌತಿಕ 52 ಗುರಿ, ಶ್ರಮಶಕ್ತಿ ಜಿಲ್ಲೆಗೆ- ಭೌತಿಕ 105 ಗುರಿ, ಮೈಕ್ರೋಕ್ರೆಡಿಟ್- ಜಿಲ್ಲೆಗೆ ಭೌತಿಕ ಗುರಿ 314, ಗಂಗಾ ಕಲ್ಯಾಣ -33 ಭೌತಿಕ ಗುರಿ, ಪಶುಸಂಘೋಪನೆ (ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ) (ಮಹಿಳೆಯರಿಗೆ ಮಾತ್ರ ಮೀಸಲಿಡಲಾಗಿದೆ) ಜಿಲ್ಲೆಗೆ 33 ಭೌತಿಕ ಗುರಿ, ವಾಹನ (ಟ್ಯಾಕ್ಸಿ-ಗೂಡ್ಸ್ ವಾಹನ) ಖರೀದಿ- ಜಿಲ್ಲೆಗೆ 7 ಭೌತಿಕ ಗುರಿ ಹಾಗೂ ಪ್ರವಾಸಿ ಸಾಲ(ಕೇರಳ ಮಾದರಿಯಲ್ಲಿ) ಯೋಜನೆಯಡಿ ಜಿಲ್ಲೆಗೆ 01 ಭೌತಿಕ ಗುರಿ ನಿಗದಿಪಡಿಸಲಾಗಿದೆ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ.

www.kmdc.kar.nic.in Or http://kmdc.karnataka.gov.inಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು   ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಪಡೆಯಬಹುದಾಗಿದ್ದು, ಸಾಲದ ಅರ್ಜಿಯನ್ನು ಆ.10ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08262220443ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News