×
Ad

ಲಂಚ ಸ್ವೀಕಾರದ ವೇಳೆ ಎಂಜಿನಿಯರ್ ಎಸಿಬಿ ಬಲೆಗೆ

Update: 2017-06-17 20:11 IST

ಶಿವಮೊಗ್ಗ, ಜೂ. 17: ಕಚೇರಿಯಲ್ಲಿಯೇ ಗುತ್ತಿಗೆದಾರರೋರ್ವರಿಂದ ಒಂದು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್‌ರೊಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದ ಬಲೆಗೆ ಬಿದ್ದ ಘಟನೆ ಶನಿವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಸಹಾಯಕ ಎಂಜಿನಿಯರ್ (ಎ.ಇ) ಹೆಚ್. ಬಸವರಾಜ್ ಎಸಿಬಿ ಬಲೆಗೆ ಬಿದ್ದವರೆಂದು ಗುರುತಿಸಲಾಗಿದೆ. ಎಸಿಬಿ ಡಿವೈಎಸ್‌ಪಿ ಚಂದ್ರಪ್ಪ ಮತ್ತವರ ಸಿಬ್ಬಂದಿಗಳಾದ ಮಹೇಶ್, ಮಂಜು, ವಸಂತ್, ಲಚ್ಚಾ ನಾಯ್ಕಾ ಕಾರ್ಯಾಚರಣೆ ನಡೆಸಿದ್ದಾರೆ.

ದೂರು: ಮಲ್ಲಯ್ಯ ಎಂಬ ಗುತ್ತಿಗೆದಾರರು ಸೊರಬ ತಾಲೂಕಿನ ನಿಸರಾಣಿ ಗ್ರಾಮದಲ್ಲಿ ಬೋರ್‌ವೆಲ್‌ವೊಂದನ್ನು ಕೊರೆದಿದ್ದರು. ಇದರ ಬಿಲ್ 98,783 ರೂ. ಮಂಜೂರು ಮಾಡಲು ಒಂದು ಸಾವಿರ ರೂ. ನೀಡುವಂತೆ ಎ.ಇ. ಹೆಚ್.ಮಂಜುನಾಥ್‌  ಬೇಡಿಕೆಯಿಟ್ಟಿದ್ದರು. ಈ ಕುರಿತಂತೆ ಮಲ್ಲಯ್ಯರವರು ಎ.ಸಿ.ಬಿ. ಪೊಲೀಸರಿಗೆ ದೂರು ನೀಡಿದ್ದರು.

ಎ.ಸಿ.ಬಿ. ಪೊಲೀಸರ ಸೂಚನೆಯಂತೆ ಶನಿವಾರ ವಿನೋಬನಗರದಲ್ಲಿರುವ ಕಚೇರಿಯಲ್ಲಿ ಎಂಜಿನಿಯರ್‌ಗೆ ಹಣ ನೀಡಿದ್ದು, ತಕ್ಷಣವೇ ಎ.ಸಿ.ಬಿ. ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News