×
Ad

ಚಿನ್ನಾಭರಣ ಕಳವು ಪ್ರಕರಣ: ಆರೋಪಿಗಳ ಬಂಧನ

Update: 2017-06-17 20:33 IST

ಹಾಸನ, ಜೂ. 17: ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿ ಅವರಿಂದ 8.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತಿಚಿಗೆ ಒಂಟಿ ಮಹಿಳೆಯರನ್ನು ಗುರುತಿಸಿ ಮೋಟರ್ ಬೈಕಿನಲ್ಲಿ ಬಂದು ಚಿನ್ನದ ಸರಗಳನ್ನು ದೋಚಿಕೊಂಡು ಹೋಗುತ್ತಿದ್ದ ಬಗ್ಗೆ ಠಾಣೆಯಲ್ಲಿ ವರದಿ ಆಗಿತ್ತು. ಇದರಿಂದ ಮಹಿಳೆಯರಲ್ಲಿ ಭಯದ ವಾತವರಣ ಸೃಷ್ಠಿ ಮಾಡಿದ್ದ ಸೂಕ್ಷ್ಮತೆಯನ್ನು ಗಮನಿಸಿದ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಲಾಯಿತು. ಅನುಮಾನಸ್ಪದವಾಗಿ ಮೋಟರ್ ವಾಹನದಲ್ಲಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಯಿತು ಎಂದರು.

ನಗರದ ಹಳೆಮಟನ್ ಮಾರ್ಕೇಟ್ ಹತ್ತಿರ ವಾಸವಾಗಿರುವ ಹಣ್ಣಿನ ವ್ಯಾಪಾರ ಮಾಡುವ ಮಹಮದ್ ಮುದಾಸೀರ್ (22), ಪೊಲೀಸ್ ಕ್ವಾಟ್ರಸ್ ರಸ್ತೆ, ಹಳೆ ಮಟನ್ ಮಾರ್ಕೇಟ್ ಬಳಿ ವಾಸವಾಗಿರುವ ವೆಲ್ಡಿಂಗ್ ಕೆಲಸ ಮಾಡುವ ಮುದಾಸೀರ್ ಅಹಮದ್ (20), ಚಿನ್ನ ಬೆಳ್ಳಿ ಕೆಲಸ ಮಾಡುವ ಶಾಕಿಬ್ (20), 1ನೇ ಕ್ರಾಸ್ ಆದರ್ಶ ನಗರ ನಿವಾಸಿ ಗುಜರಿ ವ್ಯಾಪಾರ ಮಾಡುವ ಸುಹೇಬ್ ಖಾನ್ (20), ಕುಂಬಾರ ಬೀದಿ ನಿವಾಸಿ ಕಟ್ಟಿನಕೆರೆಯಲ್ಲಿ ಹಣ್ಣಿನ ವ್ಯಾಪಾರ ಮಾಡುವ ಫೈರೋಜ್ (20), ಇಲಾಹಿ ನಗರ ಹಳೆ ಎಪಿ ಹಾಲ್ ನಿವಾಸಿ ಕಾರ್ ಪಿಂಕ್ ಕೆಲಸ ಮಾಡುವ ಶಾಹಿದ್ (22) ಹಾಗೂ ಪೆನ್‌ಷೆನ್ ಮೊಹಲ್ಲಾ ನಿವಾಸಿ ಗುಜರಿ ವ್ಯಾಪಾರ ಮಾಡುವ ಮಹಮದ್ ಅಪ್ಲಲ್ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News