×
Ad

ಜೆಸಿಐ ಸಮಾಜಮುಖಿ ಕೆಲಸದಿಂದ ವ್ಯಕ್ತಿತ್ವ ವಿಕಸನಕ್ಕೆ ಮಾದರಿ: ಬಿ.ಬಿ.ನಿಂಗಯ್ಯ

Update: 2017-06-18 15:12 IST

ಮೂಡಿಗೆರೆ, ಜೂ.18:  ಸಮಾಜಮುಖಿ ಕಾರ್ಯಗಳೊಂದಿಗೆ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಸಹಕರಿಸಿ ಯುವ ಮುಂದಾಳುತ್ವವನ್ನು ಪ್ರತಿಬಿಂಬಿಸಿ ಜನರನ್ನು ಮುಖ್ಯವಾಹಿನಿಯತ್ತ ತಂದು ದೇಶದಲ್ಲೇ ಮಾದರಿ ಸಂಸ್ಥೆಯಾಗಿ ಸುಂದರ ಸಮಾಜ ನಿರ್ಮಾಣದ ಕನಸ್ಸನ್ನು ಸಾರ್ಥಕವಾಗಿಸುವ ನಿಟ್ಟಿನಲ್ಲಿ ಜೆಸಿಐ ಬೆಳೆಯುತ್ತಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

ಅವರು ಬಣಕಲ್‌ನ ಸುಭಾಷ್‌ನಗರದ ಸಂತೆಮೈದಾನದ ಸಮೀಪ ನೂತನ ಜೇಸಿ ಭವನದ ಗುದ್ದಲಿಪೂಜೆ ನೆರೆವೇರಿಸಿ ಮಾತನಾಡಿದರು.

ಜನರ ಬೇಕು ಬೇಡಗಳಿಗೆ ಸ್ಪಂಧಿಸಿ ಸಂಸ್ಥೆ ಯುವಕರನ್ನು ತರಬೇತಿಗೊಳಿಸಿ ಸಮಾಜದಲ್ಲಿ ತಮ್ಮ ಛಾಪು ಮೂಡಿಸಿದೆ. ಬಣಕಲ್ ಭಾಗದಲ್ಲಿ ಜೇಸಿ ಭವನದ ಅಗತ್ಯವಿತ್ತು. ಬಣಕಲ್ ಗ್ರಾಂ.ಪಂ.ಅಧಿಕಾರಿಗಳು ನಿವೇಶನ ನೀಡಿ ಸಹಕರಿಸಿದ್ದಾರೆ. ನನ್ನ ಅನುದಾನದಿಂದ ಸಮಾಜದ ಒಳಿತಿಗಾಗಿ ಈ ಭವನಕ್ಕೆ 5 ಲಕ್ಷ ರೂ.ಗಳ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಜೆಸಿಐನ ರಾಷ್ಟ್ರೀಯ ನಿರ್ದೇಶಕ ಡಾ.ನವೀನ್ ಲಾಯ್ಡ ಮಿಸ್ಕಿತ್ ಮಾತನಾಡಿ, ಬಣಕಲ್ ಜೆಸಿಐ ಸಂಸ್ಥೆ ಜೇಸಿ ಭವನದ ಕನಸಿನ ದೊಡ್ಡ ಹೆಜ್ಜೆ ಇರಿಸಿದೆ. 7ನೇ ಘಟಕ ಬಣಕಲ್‌ನಲ್ಲಿ ನಿರ್ಮಾಣ ಮಾಡಲು ಇಲ್ಲಿನ ಪಧಾಧಿಕಾರಿಗಳು ಪಣ ತೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯು ಬಣಕಲ್‌ನಲ್ಲಿ ಅನೇಕ ಸಮಾಜಮುಖಿ ಕಾರ್ಯದತ್ತ ನಡೆಯುತ್ತಿದೆ. ಈ ಜೇಸಿ ಭವನ ಉತ್ತಮ ಕಾರ್ಯಗಳಿಗೆ ಉಪಯೋಗವಾಗಲಿ. ಉತ್ತಮ ನಾಯಕತ್ವದ ಗುಣ ಮಟ್ಟದಿಂದ ಇಂತಹ ಒಳ್ಳೆಯ ಉದ್ದೇಶಗಳು ನೆರವೇರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ರಿಚರ್ಡ್ ಮಥಾಯಿಸ್, ಬಣಕಲ್ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ತಾಪಂ. ಸದಸ್ಯೆ ವೇದಾಲಕ್ಷ್ಮಣ್, ಗ್ರಾಪಂ ಸದಸ್ಯ ಸತೀಶ್‌ಮತ್ತಿಕಟ್ಟೆ, ನಿಕಟಪೂರ್ವ .ಅಧ್ಯಕ್ಷ ಕವೀಶ್, ಹರ್ಷವರ್ಧನ್, ಟಿ.ಎಂ.ಗಜೇಂದ್ರ, ಸುರೇಶ್‌ಶೆಟ್ಟಿ, ರವಿಪಟೇಲ್, ಉಪಾದ್ಯಕ್ಷ ರವಿವಾಟೇಖಾನ್, ಸೋಮೇಶ್‌ಮರ್ಕಲ್, ಸಂಜಯ್‌ಗೌಡ, ವಸಂತ್‌ಕೋಳೂರು, ಪ್ರಮೋದ್, ಹಿಮಶಂಕರ್, ಅರುಣ್‌ಮೋರಾಸ್, ವಿನಯ್, ಅನಿಲ್‌ದೊಡ್ಡನಂದಿ, ಪ್ರಶಾಂತಿ, ಮಯೂರ, ವಿದ್ಯಾ, ದಿಲ್‌ದಾರ್‌ಬೇಗಂ, ಎಚ್.ಟಿ.ಪ್ರಸನ್ನ, ಆದರ್ಶ್‌ಬಾಳೂರು, ಸದಾಶಿವ, ಚಂದನ್, ಗೋಪಾಲಾಚಾರ್, ರಾಜೇಶ್, ಪ್ರವೀಣ್, ಉಮ್ಮರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News