ಮರಳು ಕಳ್ಳರಿಗೆ ಸಹಕರಿಸುವ ಪೊಲೀಸರಿಗೆ ಅಣ್ಣಾಮಲೈ ಖಡಕ್ ಎಚ್ಚರಿಕೆ

Update: 2017-06-18 09:53 GMT

ಚಿಕ್ಕಮಗಳೂರು, ಜೂ.18: ಮರಳು ದಂಧೆಕೋರರು, ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿದ್ದ ಎಸ್ಪಿ ಕೆ.ಅಣ್ಣಾಮಲೈ ಇದೀಗ ತಮ್ಮ ಸಿಬ್ಬಂದಿ ಹಾಗೂ ಕೆಲ ಅಧಿಕಾರಿ ವರ್ಗದ ವಿರುದ್ಧ ರೆಬಲ್ ಆಗಿದ್ದಾರೆ. ಅಕ್ರಮ ಮರಳುಗಾರಿಕೆಗೆ ಪೊಲೀಸರು ಹಾಗೂ ಕೆಲ ಅಧಿಕಾರಿಗಳೇ ಕೈಜೋಡಿಸಿರುವುದು ಅಣ್ಣಾಮಲೈ ಆಕ್ರೋಶಕ್ಕೆ ಕಾರಣವಾಗಿದೆ.  ವ್ಯವಸ್ಥೆಯೇ ಭ್ರಷ್ಟಾಚಾರದಲ್ಲಿ ಮುಳುಗಿ ಅಕ್ರಮ ಮರಳುಗಾರಿಕೆಗೆ ಸಾಥ್ ನೀಡ್ತಿರೋದ್ರಿಂದ ಟೋಲ್ ಫ್ರೀ ನಂಬರ್ ಬಿಟ್ಟಿರುವ ಎಸ್ಪಿ, ಅಕ್ರಮ ಮರಳುಗಾರಿಕೆ ಕಂಡು ಬಂದಲ್ಲಿ 24/7 ಕರೆ ಮಾಡಿ ಮಾಹಿತಿ ಕೊಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಅಕ್ರಮ ಮರಳುಗಾರಿಕೆಯಲ್ಲಿ ಪೊಲೀಸರೇ ಶಾಮೀಲಾಗಿರುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಸಂಬಂಧ ಎಸ್ಪಿ ಕೆ.ಅಣ್ಣಾಮಲೈ ತಮ್ಮ ಇಲಾಖೆಯ ಪೊಲೀಸ್  ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ. ಮರಳು ಲಾರಿ, ಟ್ರ್ಯಾಕ್ಟರ್‌ಗಳನ್ನು ರಸ್ತೆ ಮಧ್ಯೆ ಬೆನ್ನಟ್ಟಿ ಹಿಡಿಯುವ ಪೊಲೀಸರು ಎಸ್ಪಿ ಬಳಿ 50 ಸಾವಿರ ಅಥವಾ 1 ಲಕ್ಷ ಫೈನ್ ಆಗತ್ತೆ. ಇಲ್ಲೆ ಸೆಟ್ಲ್ ಮಾಡ್ಕೋಳಿ ಎಂದು 10,20,30 ಸಾವಿರ ಪಡೆದು ಲಾರಿ ಟ್ರ್ಯಾಕ್ಟರ್‌ಗಳನ್ನು ಬಿಟ್ಟು ಕಳಿಸುತ್ತಿರುವ ಮಾಹಿತಿ ಎಸ್ಪಿ ಗಮನಕ್ಕೆ ಬಂದಿದೆ.

ಆ್ದರಿಂದ ಎಸ್ಪಿ ಕೆ.ಅಣ್ಣಾಮಲೈ ಖುದ್ದಾಗಿ 9480805173 ನಂಬರ್ ಇಟ್ಟುಕೊಂಡು ಅಕ್ರಮ ಮರಳುಗಾರಿಕೆ ನಡೆಸುವವರು, ಅವರಿಗೆ ಸಾಥ್ ನೀಡುವವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೇಳಿದ್ದಾರೆ.ಅಕ್ರಮದಲ್ಲಿ ಪೊಲೀಸರೇ ಶಾಮೀಲಾಗಿರುವುದು ಕಂಡುಬಂದಲ್ಲಿ ಅವರನ್ನುತಕ್ಷಣ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾದ್ಯಂತ ಕಳೆದ ಐದಾರು ತಿಂಗಳ ಅವಧಿಯಲ್ಲಿ300 ಕ್ಕೂ ಹೆಚ್ಚು ಲಾರಿ, ಟ್ರ್ಯಾಕ್ಟರ್‌ಗೆ ದಂಡ ಹಾಕಿದ್ದಾರೆ. ಬಿಟ್ಟಿರುವುದು ಅದಕ್ಕಿಂತ ಜಾಸ್ತಿ ಇರಬಹುದು. ಅಕ್ರಮ ಮರಳುಗಾರಿಕೆಯಡಿ ಸಿಕ್ಕಿಬಿದ್ದ ವಾಹನಗ ಲೈಸನ್ಸ್ ಕೂಡ ಕ್ಯಾನ್ಸಲ್ ಮಾಡುತ್ತಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೊಲಿಸಿಕೊಂಡರೆ ಕಾಫಿನಾಡಲ್ಲಿ ಾರಿ ಪ್ರಮಾಣದಲ್ಲಿ ದಂಡವನ್ನೂ ಹಾಕುತ್ತಿದ್ದಾರೆ.  ನಾಡಿನ ಸಂಪತ್ತನ್ನು ರಕ್ಷಿಸಬೇಕಾದಅಧಿಕಾರಿಗಳ ವರ್ಗವುಅಕ್ರಮದಲ್ಲಿ ತೊಡಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಾಗಿದೆ. ಜಿಲ್ಲೆಗಳಲ್ಲಿ ಎಸ್ಪಿ-ಡಿಸಿ ಸ್ಟ್ರಾಂಗ್ ಆಗಿದ್ರೆ ಸಾಲದು. ಅವರ ಕೈಕೆಳಗೆ ಕಾನೂನನ್ನು ರಕ್ಷಿಸುವವರು ಅಷ್ಟೆ ಖಡಕ್ ಆಗಿದ್ದರೆಮಾತ್ರ ಅಕ್ರಮಗಳಿಗೆ ಬ್ರೇಕ್ ಹಾಕಲು ಸಾಧ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ನಾಡಿನ ಸಂಪತ್ತು ಅಧಿಕಾರಿಗಳ ಣ್ಣೆದುರೇ ಸಂಪೂರ್ಣ ಲೂಟಿಯಾದರೂ ಆಶ್ಚರ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News