×
Ad

ಸಾರ್ವಜನಿಕರ ಹಿತರಕ್ಷಣೆಗಾಗಿ ಕಾರ್ಯ ಪ್ರವೃತ್ತಿಯಾಗಿರುವ ಪೊಲೀಸ್ ಬಿಟ್

Update: 2017-06-18 16:18 IST

ಕುಶಾಲನಗರ ಜೂ,18: ಕರ್ನಾಟಕ ರಾಜ್ಯ ಪೊಲೀಸ್‌ ವತಿಯಿಂದ ವಿನೂತನ ಸೇವೆಯನ್ನು ಆರಂಭಿಸಿದ್ದು, ವಾರದ 24 ಗಂಟೆ ಸಾರ್ವಜನಿಕರ ಹಿತರಕ್ಷಣೆಗಾಗಿ ಕಾರ್ಯ ಪ್ರವೃತ್ತಿಯಾಗಿರುವ ನಿಟ್ಟಿನಲ್ಲಿ ಪೊಲೀಸ್ ಬಿಟ್ ಹಾಕಲಾಗಿದೆ.

“ಇದರ ಅನುಗುಣದಂತೆ ಸಶಕ್ತ ಪೊಲೀಸ್ ಸಶಕ್ತ ಸಮುದಾಯ” ಎಂಬ ಹೆಸರಿನಲ್ಲಿ ನಮ್ಮ ಸಮವಸ್ತ್ರ ನಮ್ಮ ಹೆಮ್ಮೆ ಎಂಬುದಾಗಿ ನಗರ ಪ್ರದೇಶದ ಅಪರಾಧ ಕೃತ್ಯಗಳನ್ನು ತಡೆಯುವ ದೃಷ್ಠಿಕೋನದಿಂದ ಪತ್ರಿ ಬಡಾವಣೆಗೆ ಒಬ್ಬ ಪೊಲೀಸ್‌ರನ್ನು ನೇಮಕ ಮಾಡಿದೆ. ಏನೇ ಅಹಿತಕರ ಘಟನೆ ಮತ್ತು ಕೃತ್ಯಗಳು ನೆಡೆದಲ್ಲಿ ಮೊದಲು ಆ ಪೊಲೀಸ್‌ಗೆ ಮಾಹಿತಿ ನೀಡುವಂತೆ ಮಾಡಿ, ಅವರ ಕೆಳಗೆ ಆ ಬಡಾವಣೆಯ ಕೆಲವು ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿಕೊಂಡಿದೆ. ಇದರ ಮೂಲಕ ಸಮುದಾಯ ಶ್ರೇಯಸ್ಸಿಗೆ ಪಣತೊಟ್ಟು ನೀಡಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆ ವಿನೂತನ ಕಾರ್ಯವನ್ನು ಸ್ವಾಗತಿಸಿದ್ದಾರೆ.

ಈ ಉದ್ದೇಶವಾಗಿ ಹೆಚ್.ಆರ್.ಪಿ ಕಾಲೋನಿಯಲ್ಲಿ ಭಾನುವಾರ ಕುಶಾಲನಗರ ಟೌನ್ ಪೊಲೀಸ್ ರಾಣೆಯ ಎ.ಎಸ್.ಐ ಗೋಪಾಲ್ ನೇತ್ರತ್ವದಲ್ಲಿ, ಪೊಲೀಸ್ ಸಿಬ್ಬಂದಿಯಾದ ಚಂದ್ರಶೇಖರ ರವರು ಬಡಾವಣೆಯ ಪ್ರಮುಖ ಸಮಸ್ಯೆ ಮತ್ತು ಅಪರಾದ ಕೃತ್ಯಗಳ ಬಗ್ಗೆ ಮಾಹಿತಿ ಪಡೆದರು. ಹಾಗೆ ಯಾವ ರೀತಿ ಪೊಲೀಸ್‌ಗೆ ಮಾಹಿತಿಯನ್ನು ತಿಳಿಸಬೇಕು ಎಂಬುದರ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News