×
Ad

ಹದಗೆಟ್ಟಿರುವ ಮೇಕೇರಿ ಅರುವತ್ತೊಕ್ಲು ರಸ್ತೆ

Update: 2017-06-18 16:52 IST

ಮಡಿಕೇರಿ,ಜೂ.18: ಮೇಕೇರಿ ಗ್ರಾಮ ಪಂಚಾಯತ್‌ಗೆ ಸೇರಿದ ಮೇಕೇರಿ ಹಾಗೂ ಅರುವತ್ತೊಕ್ಲುವಿಗೆ ಸಂಪರ್ಕ ಕಲ್ಪಿಸುವ ಡಾಂಬರು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಗ್ರಾಮೀಣರು ಪರದಾಡುವಂತಾಗಿದೆ.

ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯ ಕಡೆಗೆ ಸಾಗಲು ಯೋಗ್ಯ ಸಂಪರ್ಕ ವ್ಯವಸ್ಥೆ ಅವಶ್ಯಕವಾಗಿದೆ. ಗ್ರಾಮೀಣ ಜನತೆ ತಮ್ಮ ಅವಶ್ಯಕ ಕೆಲಸ ಕಾರ್ಯಗಳಿಗಾಗಿ, ಕೃಷಿ ಉತ್ಪನ್ನಗಳನ್ನು ಸಾಗಿಸಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಯೋಗ್ಯ ರಸ್ತೆ ಅಗತ್ಯ. ಆದರೆ ಮೇಕೇರಿ ಮತ್ತು ಅರುವತ್ತೊಕ್ಲುವಿನ ಸಂಪರ್ಕ ವದಗಿಸುವ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ಮಳೆಯ ನೀರು ಗುಂಡಿಗಳಲ್ಲಿ ತುಂಬಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ ಈ ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರು ಜನ ಸಮಾನ್ಯರು ಶಾಲಾ ವಿದ್ಯಾರ್ಥಿ ಹರಸಾಹಸ ಪಡುವಂತ್ತಾಗಿದೆ.

ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಸಿ ರಸ್ತೆ ದುರಸ್ಥಿತಿ ಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News