ಮುಖ್ಯ ಪೇದೆ ನೇಣಿಗೆ ಶರಣು
ಗುಂಡ್ಲುಪೇಟೆ,ಜೂ.19 : ಪೊಲೀಸ್ ಪೇದೆಯೊಬ್ಬರು ಕೌಟಂಬಿಕ ಕಲಹದಿಂದ ಬೇಸತ್ತು ಪೊಲೀಸ್ ವಸತಿ ಗೃಹದಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರಿನಲ್ಲಿ ನಡೆದಿದೆ.
ತಾಲ್ಲೂಕಿನ ಬೇಗೂರು ಪೋಲೀಸ್ ಠಾಣೆಯಲ್ಲಿ ದಫೇಧಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್‌ಕುಮಾರ್(40) ಗ್ರಾಮದ ಪೋಲೀಸ್ ವಸತಿ ಗೃಹದಲ್ಲಿ ಸೋಮವಾರ ಮಧ್ಯಾಹ್ನ ಮನೆಯಲ್ಲೆ ನೇಣಿಗೆ ಶರಣಾಗಿದ್ದಾರೆ. ಬೇಗೂರು ಪೋಲೀಸ್‌ಠಾಣೆಯ ಸಹದ್ಯೋಗಿಯೊಬ್ಬರು ಅನಿಲ್‌ಕುಮಾರ್ ಮೊಬೈಲ್‌ಗೆ ದೂರವಾಣಿ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ನಂತರ ಅವರ ಪತ್ನಿ ಖಾಸಗೀ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಜೆ ಮನೆಗೆಬಂದ ನಂತರ ಬಾಗಿಲು ತೆರೆಯದೇ ಇದ್ದಾಗ ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ಅನಿಲ್‌ಕುಮಾರ್ ಮೂಲತಃ ಚಾಮರಾಜನಗರದವರಾಗಿದ್ದು, 2002ರಲ್ಲಿ ಕೊಳ್ಳೆಗಾಲ ಪೋಲೀಸ್‌ಠಾಣೆಗೆ ಮುಖ್ಯಪೇದೆಯಾಗಿ ಕರ್ತವ್ಯಕ್ಕೆ ಸೇರಿದ ಇವರು ನಂತರ ಕಬ್ಬಹಳ್ಳಿ, ತೆರಕಣಾಂಬಿ, ಗುಂಡ್ಲುಪೇಟೆ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದು ಕಳೆದ 1 ವರ್ಷದ ಹಿಂದೆ ಮುಖ್ಯಪೇದೆ (ದಫೇಧಾರ್) ಆಗಿ ಭಡ್ತಿ ಪಡೆದು ಬೇಗೂರು ಠಾಣೆಗೆ ವರ್ಗಾವಣೆಗೊಂಡು ಪೋಲೀಸ್ ವಸತಿಗೃಹದಲ್ಲೆ ಕುಟುಂಬ ಸಮೇತ ವಾಸವಾಗಿದ್ದರು.
ಎರಡನೇ ಪ್ರಕರಣ: ಪೋಲೀಸ್ ವಸತಿಗೃಹ ಉದ್ಘಾಟನೆಗೊಂಡು 2ವರ್ಷಗಳಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಕಬ್ಬಹಳ್ಳಿ ಗ್ರಾಮದ ಎಸ್.ಪ್ರಸಾದ್ ಎಂಬುವವರು ವಸತಿಗೃಹದ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅದನ್ನು ಮರೆಯುವ ಮುಂಚಯೇ ಮೂರು ತಿಂಗಳ ಹಂತರದಲ್ಲೆ ಅನಿಲ್‌ಕುಮಾರ್ ವಸತಿಗೃಹದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲೆ ಸಾವಿಗೀಡಾಗಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿದೆ. ಅನಿಲ್‌ಕುಮಾರ್‌ರವರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಇದ್ದಾರೆ.
ಭೇಟಿ :ಪೊಲೀಸ್ ಮುಖ್ಯಪೇದೆ ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಬೇಗೂರು ಪೊಲೀಸ್ ಕ್ವಾಟ್ರಸ್‌ಗೆ ಬೇಟಿ ನೀಡಿ, ಮೃತ ಅನಿಲ್ ಕುಮಾರ್ ಪತ್ನಿ ಸಹಿತ ಹಲವಾರು ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರು.
ಗುಂಡ್ಲುಪೇಟೆ ಪೋಲೀಸ್‌ಠಾಣೆಯ ಸರ್ಕಲ್‌ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮೃತದೇಹವನ್ನು ಗುಂಡ್ಲುಪೆಟೆಯ ಸರ್ಕಾರಿ ಆಸ್ಪತ್ರೆಗೆ ಪೋಲೀಸ್ ವಾಹನದಲ್ಲೆ ಸಾಗಿಸಿದರು. ಡಿ,ವೈ,ಎಸ್.ಪಿ ಗಂಗಾಧರಸ್ವಾಮಿ, ಬೇಗೂರು ಪಿಎಸ್‌ಐ ಕಿರಣ್‌ಕುಮಾರ್ ಭೇಟಿನೀಡಿ ಪರಿಶೀಲಿಸಿದರು.