ದಕ್ಷಿಣ ಕನ್ನಡ ಘಟನೆಗೆ ಕಾರಣರಾದ ರಮಾನಾಥ ರೈ ಸಂಪುಟದಿಮದ ಕೈಬಿಡಬೇಕು: ಸಿ.ಟಿ.ರವಿ
ಚಿಕ್ಕಮಗಳೂರು, ಜೂ.19:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯು ತ್ತಿರುವ ಅಹಿತಕರ ಘಟನೆಗಳಿಗೆ ಅಲ್ಲಿನ ಉಸ್ತುವಾರಿ ಸಚಿವರು ಕಾರಣರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಶಾಸಕ ಸಿ.ಟಿ.ರವಿ ಆಗ್ರಹಪಡಿಸಿದ್ದಾರೆ.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ನಿನ್ನೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿರುವ ಸೂಚನೆ ಆ ಜಿಲ್ಲೆಯಲ್ಲಿ ಸಮಸ್ಯೆಗೆ ಅವರೇ ಕಾರಣರು ಎಂಬುವುದು ಖಚಿತವಾಗಿದ್ದು ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕೆಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾ ಕರ್‌ಭಟ್ಟ ಅವರನ್ನು ಬಂಧಿಸುಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನೀಡಿರುವ ಸೂಚನೆಯ ಚಿತಾವ ಣೆಯನ್ನು ತಾವು ಖಂಡಿಸುವುದಾಗಿ ತಿಳಿಸಿದ ಅವರು ಈ ಹಿಂದೆಯೂ ಸಚಿವ ರಮಾನಾಥ್‌ರೈ ಅವರ ಮೇಲೆ ಎಸ್‌ಡಿಪಿಐಗೆ ಬೆಂಬಲಿಸಿ ಆ ಜಿಲ್ಲೆಯಲ್ಲಿ ತಾಲಿಬಾನ್ ಸಂಸ್ಕೃತಿಗೆ ಪ್ರೋತ್ಸಾಹಿಸುವ ಆರೋಪವಿತ್ತು. ಈಗ ರಾಷ್ಟ್ರ ಭಕ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ರಾಷ್ಟ್ರ ವಿರೋಧಿಗಳಿಗೆ ಕು್ಮುಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದರು.
ಕಳೆದ ಮೂರೂವರೆ ದಶಕಗಳಿಂದ ಕಲ್ಲಡ್ಕದಲ್ಲಿ ಆಗಾಗ್ಗೆ ಕೋಮುಗಲಭೆ ನಡೆಯುತ್ತಿದ್ದು ಆಗ ಕಲ್ಲಡ್ಕ ಪ್ರಭಾಕರ ಭಟ್ಟರ ಹೆಸರು ಕೇಳಿ ಬರುತ್ತಿತ್ತು. ಅಂತಹ ಪ್ರಕರಣದಲ್ಲಿ ಅವರ ಪಾತ್ರವಿಲ್ಲವೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಶಾಸಕ ಸಿ.ಟಿ.ರವಿ, ಪ್ರಭಾಕರ್‌ಭಟ್ ಅವರು ಅಲ್ಲಿ ಸಾವಿರಾರು ವಿದ್ಯಾರ್ಥಿ ಗಳಿಗೆ ಉಚಿತ ಶಿಕ್ಷಣ ಕಲ್ಪಿಸುತ್ತಿದ್ದಾರೆ. ರಾಷ್ಟ್ರಭಕ್ತಿ ಜಾಗೃತಿ ಕೆಲಸಮಾಡು ತ್ತಿದ್ದಾರೆ. ಅವರವಿರುದ್ಧ ರಾಷ್ಟ್ರವಿರೋ ಧಿಗಳು ಮಾತ್ರ ಅವರನ್ನು ಗುರಿಯಾಗಿಸುತ್ತಾರೆ ಎಂದು ಹೇಳಿದರು.
ಭಾರತ ನಿನ್ನೆ ಕ್ರಿಕೆಟ್‌ನಲ್ಲಿ ಸೋಲು ಕಂಡು ಪಾಕಿಸ್ಥಾನ ಗೆಲುವು ಪಡೆದ ಹಿನ್ನೆಲೆಯಲ್ಲಿ ಆಲ್ದೂರಿನಲ್ಲಿ ಐವರು ಪಾಕಿಸ್ತಾನ ಪರ ಘೋಷಣೆ ಕೂಗಿ ದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಂತಹ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಎಲ್ಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಅವರು, ಘೋಷಣೆ ಕೂಗಿದವರಿಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ಇದ್ದರೆ ಅವರನ್ನು ಭಾರತದ ಗಡಿದಾಟಿಸುವಂತೆ ತಾವು ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರವನ್ನು ಒತ್ತಾಯಪಡಿಸುವುದಾಗಿ ಹೇಳಿದರು.