×
Ad

ಹನೂರು : ರಮಝಾನ್ ಕಿಟ್ ವಿತರಣೆ

Update: 2017-06-20 19:59 IST

ಹನೂರು,ಜೂ.20:  ಪವಿತ್ರ ಹಬ್ಬವಾದ ರಮಝಾನ್ ಪ್ರಯುಕ್ತ ಬಡವರಿಗೆ ಆಹಾರ ಪದಾರ್ಥಗಳು ಇನ್ನಿತರ ಸಾಮಾಗ್ರಿಗಳನ್ನೂಳಗೂಂಡ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಮೌಲಾನ ಆಝಾದ್ ಎಜುಕೇಷನಲ್ ಅಂಡ್ ವೆಲ್ ಫೇರ್ ಕಮಿಟಿಯ ವತಿಯಿಂದ ಪಟ್ಟಣದ ಎ,ಪಿ,ಎಂ ಸಿ ಆವರಣದಲ್ಲಿ ನೆರವೇರಿತು.

ಪಟ್ಟಣದ ಸುತ್ತಮುತ್ತಲ್ಲಿನ ಸುಮಾರು ನಾಲ್ಕುನೂರುಕ್ಕಿಂತ ಹೆಚ್ಚು ಬಡ ಕುಂಟಬಗಳು ರಮಝಾನ್ ಕಿಟ್ಟಿನ ಪ್ರಯೋಜನ ಪಡೆದರು. ಈ ವೇಳೆ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಎಮ್.ಡಿ.ಮುಜಾಹಿದ್ ಮಾತನಾಡಿ ಬಡವರು ಸಹ ಇತರರಂತೆ ಪವಿತ್ರ ರಮಝಾನ್ ಹಬ್ಬವನ್ನು ಸಡಗರದಿಂದ ಆಚರಿಸಲಿ ಎಂಬ ಉದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಇದು ಬಡವರಿಗಾಗಿ ನನ್ನದೊಂದು ಅಳಿಲು ಸೇವೆಯಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಅಲ್ಪಾಸಂಖ್ಯಾತರ ಅಭಿವೃದ್ದಿ ನಿಟ್ಟಿನಲ್ಲಿ ಹಲವಾರು ಯೋಜನೆಗಳಿದ್ದು ಅದರ ಪ್ರಯೋಜನ ಪಡೆಯುವ ಬಗ್ಗೆ ಮಾಹಿತಿ ನೀಡಿದರು.

ಕಾಂಗ್ರೇಸ್ ಅಲ್ಪ ಸಂಖ್ಯಾತರ ವಿಬಾಗದ ಅದಕ್ಷ ಶ್ರೀ ಸಯೀದ್ ಅಹಮದ್ ಮಾತನಾಡಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ಮನೋಬಾವನ್ನು ಬೆಳಸಿಕೋಳ್ಳಬೇಕು . ಈ ನಿಟ್ಟಿನಲ್ಲಿ ಹಲವಾರು ರೀತಿಯಲ್ಲಿ ಬಡವರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಮುಜಾಹಿದ್ ಅವರು ಮಾದರಿಯಾಗಿದ್ದಾರೆ ಎಂದರು..ಶಿಕ್ಷಣ ವಿವಾಹ ಹಾಗು ಇತರ ಬಡವರ ನೋವುಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅವರಿಂದ ಇನ್ನು ಹೆಚ್ಚಿನ ಬಡವರ ಪರವಾದ ಕಾರ್ಯಕ್ರಮಗಳು ಜರುಗಲಿ ಎಂದು ಹಾರೈಸಿದರು.

 ಇಂದಿನ ದಿನಗಲ್ಲಿ ಅಲ್ಪಸಂಖ್ಯಾತರರು ಶೈಕ್ಷಣಿಕವಾಗಿ ಮುಂದುವರೆಯುವುದು ಅನಿವಾರ್ಯವಾಗಿದೆ . ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಅನೇಕ ಯೋಜನೆಗಳನ್ನು ಹಾಗೂ ಅನುದಾನಗಳನ್ನು ಬಿಡುಗಡೆ ಮಾಡ್ಡಿದ್ದು ಇದರ ಪ್ರಯೋಜನಗಳ ಬಗ್ಗೆ ತಿಳಿಸಿದರು . ಅಲ್ಲದೆ ಯುವಕರು ರಾಜಕೀಯವಾಗಿ ಶಕ್ತಿಯಾಗಿ ಬದಲಾಗಬೇಕಿದೆ ಎಂದು ಕರೆ ನೀಡಿದರು

ಇದೇ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧಕ್ಷ್ಯ ಜಾವದ್ ಅಹಮದ್, ಸಯ್ಯದ್ ಗೌಸ್ ರಿಝ್ವಾನ್, ಮೊಹಮ್ಮದ್ ರಾಹಿಲ್ ಮುಬಾರಖ್, ಎಜಾಸ್ ವಜೀರ್, ಅಹಮದ್ ಶಬ್ಬಿರ್, ಹುಸೇನ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News