×
Ad

ಶಿಕ್ಷಕನಿಂದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ : ಜಿಲ್ಲಾಧಿಕಾರಿಗೆ ದೂರು

Update: 2017-06-20 21:04 IST

ತುಮಕೂರು,ಜೂ.20:ಶತಮಾನ ಕಂಡಿರುವ ಪ್ರತಿಷ್ಠಿತ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಶಿಕ್ಷಕರೊಬ್ಬರು ನಿರಂತರ ಲೈಂಗಿಕ ಕಿರುಕುಳ ನೀಡುತಿದ್ದು,ನೊಂದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಶತಮಾನ ಕಳೆದಿರುವ ಪ್ರೌಢಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು ಇಲ್ಲಿಯ ಇಂಗ್ಲೀಷ್ ಶಿಕ್ಷಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂು ವಿದ್ಯಾರ್ಥಿನಿಯರೇ ಆರೋಪಿಸಿದ್ದಾರೆ.

ಶಾಲೆಗೆ ಬರುವ ವಿದ್ಯಾರ್ಥಿನಿಯರನ್ನು ಕಳೆದೆಂಟು ವರ್ಷಗಳಿಂದ ಪೀಡಿಸಿರುವ ಈ ಶಿಕ್ಷಕ ವಿದ್ಯಾರ್ಥಿನಿಯರನ್ನು ಅಶ್ಲೀಲವಾಗಿ ಮಾತನಾಡಿಸುವುದು, ಸುಂದರವಾಗಿರುವ ವಿ್ಯಾರ್ಥಿನಿಯರ ಬಳಿ ಹೋಗಿ ಅವರ ಹಾಕಿರುವ ಬಟ್ಟೆಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು,ಇಂತಹದ್ದೇ ಬಟ್ಟೆ ಹಾಕಿಕೊಂಡು ಬರುವಂತೆ ತಾಕೀತು ಮಾಡುವುದು.ಇನ್ನಿತರ ಲೈಂಗಿಕ ಕಿರುಕುಳ ನೀಡುತಿದ್ದಾರೆ ಎಂಬುದು ವಿದ್ಯಾರ್ಥಿನಿಯರ ದೂರಾಗಿದೆ.

ಒಂದು ವೇಳೆ ಶಿಕ್ಷಕರ ನೀಡುತ್ತಿರುವ ಲೈಂಗಿಕ ಕಿರುಕುಳಕ್ಕೆ ಸಿಡಿದೆದ್ದರೇ ಅಂಕಗಳನ್ನು ಕಡಿಮೆ ಮಾಡಿ ಅನಗತ್ಯ ಕಿರುಕುಳ ನೀಡುವುದಲ್ಲದೆ,ಬಾಯಿಗೆ ಬಂದಂತೆ ಹಿಯಾಳಿಸಿ ಇತರೆ ವಿದ್ಯಾರ್ಥಿನಿಯರ ಮುಂದೆ ಮಾತನಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಪ್ರಾಂಶುಪಾಲರಿಗೆ ಮತ್ತು ಉಪ ಪ್ರಾಂಶುಪಾಲರಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ವಿದ್ಯಾರ್ಥಿನಿಯರ ಅಪಾದನೆಚಿಾಗಿದೆ.

 ಇದು ಪದವಿಪೂರ್ವ ಕಾಲ್ಭೆಜಾಗಿದ್ದರೂ, ಪ್ರೌಢಶಾಲೆಯನ್ನು ಉಪಪ್ರಾಂಶುಪಾಲರೇ ನಿರ್ವಹಿಸುತ್ತಿದ್ದು,ಆ ಉಪನ್ಯಾಸಕರಿಗೆ ಉಪಪ್ರಾಂಶುಪಾಲರೇ ಇವರಿಗೆ ಬೆಂಬಲ ನೀಡುತ್ತಾರೆ. ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡಿದರೂ ಅವರ ಮಾತನ್ನು ತಿರಸ್ಕರಿಸುತ್ತಾ ಬಂದಿದ್ದು,ದೂರು ನೀಡಿದ ವಿದ್ಯಾರ್ಥಿನಿಯರನ್ನೇ ಬಾಯಿಗೆ ಬಂದಂತೆ ಬೈದು ಕಳುಹಿದ ಉದಾಹರಣೆ ಇದೆ.ನೊಂದ ವಿದ್ಯಾರ್ಥಿನಿಯರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಇಶಾಪಂತ್ ಅವರಿಗೂ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಿದ್ದರೂ ಸದರಿ ಶಿಕ್ಷಕನ ವಿರುದ್ದ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈ ಸಂಬಂಧವಾಗಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರಿಗೆ ವಿದ್ಯಾರ್ಥಿನಿಯರು ದೂರು ನೀಡಿ, ಮಾನ, ಪ್ರಾಣ ಕಾಪಾಡುವಂತೆ ಮನವಿ ಮಾಡಿದ್ದಾರೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು ತಪ್ಪಿತಸ್ಥರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಕಾರಣಕ್ಕೆ, ಬ್ರಿಟಿಷ್‌ರು ನಿರ್ಮಿಸಿದ ಶಾಲೆಯಲ್ಲಿ ನಗರದ ಹ್ಲದಯ ಭಾಗದಲ್ಲಿದೆ.ಇಂತಹ ಶಾಲೆಯಲ್ಲಿಯೇ ಈ ರೀತಿ ನಡೆದರೆ, ಗ್ರಾಮೀಣ ಭಾಗದ ಕೊನೆಯಲ್ಲಿರುವ ಶಾಲೆಗಳ ವಿದ್ಯಾರ್ಥಿಗಳ ಗತಿ ಎಂಬುದು ಆತಂಕದ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News