ನಗರಸಭೆ ಆಡಳಿತ ವೈಖರಿ ಖಂಡಿಸಿ ಬಿಜೆಪಿ ಪ್ರತಿಭಟನೆ

Update: 2017-06-20 16:57 GMT

ಚಾಮರಾಜನಗರ, ಜೂ. 20: ನಗರಸಭೆ ಆಡಳಿತ ವೈಖರಿ ವಿರೋಧಿಸಿ, ಪಟ್ಟಣದಲ್ಲಿ ಡೆಂಗ್, ಚಿಕುನ್‌ಗೂನ್ಯದಿಂದ ನೂರಾರು ಮಂದಿ ನರಳುತ್ತಿದ್ದರು, ನಗರಸಭೆ ಸ್ವಚ್ಚತೆ ಕಾಪಾಡಲು ವಿಫಲವಾಗಿದೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ನಗರ ಘಟಕದಿಂದ ನಗರಸಭೆ ಕಚೇರಿ ಮುಂದೆ ಮಂಗಳವಾರದಿಂದ ಆಹೋರಾತ್ರಿ ಧರಣಿ ಆರಂಭಿಸಲಾಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟು ನಗರಸಭೆ ಕಚೇರಿ ಮುಂದೆ ಶಾಮಿಯಾನ ಹಾಕಿ ಧರಣಿ ಕುಳಿತ ಬಿಜೆಪಿ ಮುಖಂಡರು ಹಾಗೂ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ದ ಘೋಷಣೆಗಳನ್ನು ಕೂಗಿದರು. ನಗರದ 31 ವಾರ್ಡುಗಳಲ್ಲಿ ಅನೈರ್ಮಲ್ಯತೆ ತಾಂಡವಾಡುತ್ತಿದೆ. ಕಸ ವಿಲೇವಾರಿಯಾಗಿಲ್ಲ. ಚರಂಡಿಗಳಲ್ಲಿ ಹೂಳು ತುಂಬಿ ಕೊಳಚೆ ನೀರು ನಿಂತು ಸೂಳ್ಳೆಗಳು ಉತ್ಪತ್ತಿಯಾಗಿ, ಡೆಂಗ್ಯು, ಚಿಕನ್‌ಗೂನ್ಯಾ ಮಾದರಿಯ ಸಾಂಕ್ರಾಮಿಕ ಕಾಯಿಲೆಗಳಿಗೆ ನಾಗರೀಕರರು ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು   ಪ್ರತಿಭಟನಾಕಾರರು ದೂರಿದರು.
        
ಬಿಜೆಪಿ ನಗರ ಘಟಕದ ಅಧ್ಯಕ್ಷ ಸುಂದರರಾಜ್ ಮಾತನಾಡಿ, ಜಿಲ್ಲೆಯಾಗಿ 19 ವರ್ಷಗಳು ಕಳೆದರೂ ಜಿಲ್ಲಾ ಕೇಂದ್ರವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ ಅಧಿಕಾರ ಹಿಡಿದಿರುವ ಕಾಂಗ್ರಸ್ ಪಕ್ಷದ ಜನಪ್ರತಿನಿಧಿಗಳು ಕರ್ತವ್ಯವನ್ನು ಮೆರೆತು ಕುರ್ಚಿಗಾಗಿ ಕಚ್ಚಾಡುತ್ತಿದ್ಧಾರೆ. ಇತ್ತ ನಗರಕ್ಕೆ ಸಮರ್ಪಕವಾಗಿ ನೀರು ಪೊರೈಕೆಯಾಗುತ್ತಿಲ್ಲ. ಬಡಾವಣೆಗಳಲ್ಲಿ ಕಸಗಳ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಅಧ್ಯಕ್ಷೆ ಹಾಗೂ ಸದಸ್ಯರು ಅಧಿಕಾರಿಯ ವರ್ಗವಣೆಗಾಗಿ ರಾಜಧಾನಿ ಬೆಂಗಳೂರು ಆಲೆಯುತ್ತಿದ್ದಾರೆ. ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಇದರುವರೆ 10 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದರು.

ಅನೇಕರಿಗೆ ಡೆಂಗ್, ಚಿಕುನ್‌ಗೂನ್ಯಾಯಂತರ ಸಾಂಕ್ರಾಮಿಕ ರೋಗಗಳ ಸೋಂಕು ತಗಲು ಮೈಸೂರು ಹಾಗೂ ಚಾ.ನಗರ ಜಿಲ್ಲಾ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಅಸ್ಪತ್ರೆಯಲ್ಲಿ ಸೂಕ್ತ ದೊರೆಯುತ್ತಿಲ್ಲ. ಇಲ್ಲಿನ ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ಮಂಡಲಿ ಸಿಬ್ಬಂದಿ ನೇಮಕಾತಿಯ ಭ್ರಷ್ಠಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಸರ್ಕಾ ರ ಜಿಲ್ಲೆಯ ಜನತೆಗೆ ಡೆಂಗ್ಯು ಬಾಗ್ಯ, ಕತ್ತಲ ಭಾಗ್ಯ, ಧೂಳಿನ ಭಾಗ್ಯ, ಕಸದ ಭಾಗ್ಯಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದರು.
     
ಪ್ರತಿಭಟನೆಯಲ್ಲಿ ನಗರಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಗರಸಭಾ ಸದಸ್ಯರಾದ ಮಹದೇವಯ್ಯ, ಶಿವಕುಮಾರ್, ರಾಜೇಶ್, ಚೆಂಗುಮಣಿ, ಮುಖಂಡರಾದ ಶಿವಣ್ಣ, ಸುಬ್ರಮಣ್ಯ, ಆರ್.ಎಂ. ಪುಟ್ಟಣ್ಣ, ವನಾಜಾಕ್ಷಿ, ದಾಕ್ಷಾಯಿಣಿ, ಪುಷ್ಪಮಾಲಾ, ಆರ್. ರಂಗಸ್ವಾಮಿ, ಶಿವರಾಜು, ಆರ್. ಪುರುಷೋತ್ತಮ್, ರಾಮಸಮುದ್ರ ಶಿವಣ್ಣ, ಶಿವಕುಮಾರ್, ಮಾಧ್ಯಮ ಸಹ ಪ್ರಮುಖ್ ಎನ್. ಮಂಜುನಾಥ್, ಸಿ.ಎಸ್. ಮಹದೇವನಾಯಕ, ಪ್ರಸನ್ನಕುಮಾರ್, ಕೂಸಣ್ಣ, ಚಂದ್ರು, ಶಿವಮಲ್ಲು, ಸುನಿಲ್  ೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News