ರೈತರ ಸಾಲ ಮನ್ನಾ: ಕೆಜಿಎಫ್‌ನಿಂದ ಮುಖ್ಯಮಂತ್ರಿಗೆ ಅಭಿನಂಧನೆ

Update: 2017-06-21 11:55 GMT

ಚಿಕ್ಕಮಗಳೂರು, ಜೂ.21: ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಸಹಕಾರಿ ಸಂಸ್ಥೆಗಳಲ್ಲಿ ಎಲ್ಲಾ ರೈತಬೆಳೆಗಾರರು ಪಡೆದಿರುವ ಸಾಲದಲ್ಲಿ ರೂ. 50,000ರೂ.ಗಳವರೆಗೆ ಮನ್ನಾ ಮಾಡಿದೆ. ಇದಕ್ಕಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಾಗೂ ರಾಜ್ಯಸರ್ಕಾರಕ್ಕೆ ಅಭಿನಂಧನೆಗಳನ್ನು ಸಲ್ಲಿಸುತ್ತದೆ ಎಂದು ಕೆಜಿಎಫ್ ಅಧ್ಯಕ್ಷ ಜೈರಾಂ ಮತ್ತು ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್ ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.

2017ನೇ ಸಾಲಿನಲ್ಲಿ ಚುರುಕಾಗಬೇಕಿದ್ದ ುಳೆ ದುರ್ಬಲಗೊಂಡಿದೆ.ಹವಾಮಾನದಲ್ಲಿನ ಏರುಪೇರು, ಮತ್ತು ಬರಪರಿಸ್ಥಿತಿ, ಕೀಟಳ ಹಾವಳಿಯಿಂದ ಅರೇಬಿಕಾ ಕಾಫಿನಶಿಸುತ್ತಿದೆ.ಕಾಫಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿಸಿದೆ. ಮಳೆಯ ಅಭಾವದಿಂದ, ಕಾಫಿ ಬೆಳೆಗೆ ಮತ್ತು ಕಾಳು ಮೆಣಸಿಗೆ ನೀರು ಒದಗಿಸಲು ಸಾಧ್ಯವಾಗದೇ ಮೆಣಸಿನ ಬಳ್ಳಿಗಳು ಒಣಗಿನಿಂತಿವೆ.

ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆಗಾರರು ಪಡೆದಿರುವ ಸಾಲವನ್ನು ಮನ್ನಾ ಮಾಡಬೆೀಕೆಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಬೆಳೆಗಾರರ ಒಕ್ಕೂಟವು ಆಗ್ರಹಿಸಿದೆ.

ಹವಾಮಾನ ವೈಪರಿತ್ಯ ಮತ್ತು ಮಾರುಕಟ್ಟೆ ವ್ಯತ್ಯಯದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು, ಬ್ಯಾಂಕ್‌ನಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಅಸಹಾಯಕರಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರವು ಬೆಳೆಗಾರರ ನೆರವಿಗೆ ಧಾವಿಸಿ, ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News