ರಸ್ತೆ ಅಪಘಾತ: ಇಬ್ಬರಿಗೆ ಗಾಯ

Update: 2017-06-21 13:22 GMT

ಮೂಡಿಗೆರೆ, ಜೂ.21: ಕೊಟ್ಟಿಗೆಹಾರದ ಸಮೀಪ ಟಿಪ್ಪರ್ ಮರಳು ಲಾರಿ- ಕಾರು ಢಿಕ್ಕಿ ಹೊಡೆದು ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ.

ಚಾರ್ಮಾಡಿ ಘಾಟ್ ಮಾರ್ಗವಾಗಿ ಮಂಗಳೂರುನಿಂದ ಮೂಡಿಗೆರೆ ಬರುತ್ತಿದ್ದ ಕಾರು ಹಾಗೂ ಮೂಡಿಗೆರೆ ಕಡೆಯಿಂದ ಮರಳಿಗಾಗಿ ಮಂಗಳೂರಿಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂಡಿಗೆರೆ ಸಮೀಪದ ಹಳ್ಳಿಬೈಲ್‌ನ ಜಗದೀಶ್‌ ಗೌಡ ಹಾಗೂ ಪತ್ನಿ ಪ್ರಿಯಾಂಕರಿಗೆ ಗಾಯವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಚಾರ್ಮಾಡಿ ಘಾಟ್‌ನಲ್ಲಿ ಮರಳು ಲಾರಿ ನಿಷೇಧಿಸಲು ಒತ್ತಾಯ: ಮಂಗಳೂರಿನಲ್ಲಿ ಮರಳು ಸಾಗಾಣಿಕೆ ಪರವಾನಗಿ ದೊರೆತ ಹಿನ್ನಲೆಯಲ್ಲಿ ಟಿಪ್ಪರ್ ಲಾರಿಗಳು ಅತೀ ವೇಗದಲ್ಲಿ ಲಾರಿಗಳನ್ನು ಓಡಿಸಿ ಅಮಾಯಕರ ಪ್ರಾಣವನ್ನು ತೆಗೆಯುತ್ತಿದೆ. ಚಾರ್ಮಾಡಿ ಘಾಟ್ ಭಾಗದಲ್ಲೂ ಮರಳು ಲಾರಿಗಳು ಅತೀ ವೇಗದ ಚಾಲನೆಯಿಂದ ಜನಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಹಾಗಾಗಿ ಮರಳು ಲಾರಿಗಳ ಹಾವಳಿಯಿಂದ ಅಮಾಯಕರ ಜೀವ ಉಳಿಸುವ ಸಲುವಾಗಿ ಮರಳು ಲಾರಿಗಳನ್ನು ಬೇರೆ ಮಾರ್ಗವಾಗಿ ಸಂಚರಿಸಲು ಅಧಿಕಾರಿಗಳು ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News