ಪುತ್ತೂರಿನಲ್ಲಿ ಯೋಗ ದಿನಾಚರಣೆ

Update: 2017-06-21 15:02 GMT

ಪುತ್ತೂರು, ಜೂ.21: ಪುತ್ತೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಇಲ್ಲಿನ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಜಯಂತ ನಡುಬೈಲ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಇನ್ನೊಬ್ಬ ಸದಸ್ಯ ಉಲ್ಲಾಸ್ ಕೋಟ್ಯಾನ್, ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಬ್ದುಲ್ ಕುಂಞ, ಪುತ್ತೂರು ರೋಟರಿ ಪೂರ್ವದ ನಿಯೋಜಿತ ಕಾರ್ಯದರ್ಶಿ ಡಾ. ಶ್ಯಾಮ ಪ್ರಸಾದ್ ಅವರು ಅತಿಥಿಗಳಾಗಿದ್ದರು.

ಬೊಳುವಾರಿನ ಯೋಗ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಮಹಾಬಲ ಭಟ್ ಅವರು ಯೋಗ ಮತ್ತು ಯೋಗ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಿಗೆ ಡಾ.ಮಹಾಬಲ ಭಟ್ ಅವರು ಯೋಗಾಭ್ಯಾಸ ಪ್ರಾತ್ಯಕ್ಷಿಕೆ ಮಾಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News