ಯೋಗಾನುಭವ ಪುಸ್ತಕ ಬಿಡುಗಡೆ

Update: 2017-06-21 17:16 GMT

ಯಾದವಾಡ, ಜೂ. 21: ಯೋಗದಿಂದ ಶರೀರ, ಮನಸ್ಸು, ಆತ್ಮ , ಬುದ್ಧಿ ಯನ್ನು ಸ್ವಾಸ್ಥಗೊಳಿಸಿಕೊಳ್ಳಲು ಸಾಧ್ಯ, ಜೊತೆಗೆ ದೇಹ, ಮಾನಸಿಕ ದಾರ್ಢ್ಯವೂ ಯೋಗದಿಂದ ಬಳಸಿಕೊಳ್ಳು ಸಾದ್ಯ. ಈ ದೇಶದ ಬಹುಮುಖಿ ಸಂಸ್ಕೃತಿಯ ದ್ಯೋತಕ, 5000 ವರುಷಗಳ ಹಿಂದಿನಿಂದಲೂ ಖುಷಿಮುನಿಗಳಿಂದ ಬಂದ ಯೋಗಕ್ಕೆ, ಇಂದು ಜಗತ್ತಿನಲ್ಲಡೆ ಆದರ ಲಭಿಸಿದೆ ಎಂದು ಜೆ. ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಅರವಿಂದರಾವ ದೇಶಪಾಂಡೆ ಹೇಳಿದರು.

ಇಂದು ಭೋಜರಾಜ ದೇಸಾಯಿ ಕ್ರೀಡಂಗಣದಲ್ಲಿ ಎರ್ಪಡಿಸಿದ್ದ ಮೂರನೇ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತ, ಹಿರಿಯ ಯೋಗ ಪಟು, ಸಾಹಿತಿ ಶಿವಪುತ್ರ ಯಾದವಾಡರ ಕೃತಿ ‘‘ಯೋಗಾನುಭವ’’ವನ್ನು ಬಿಡುಗಡೆ ಮಾಡುತ್ತ ಲೇಖಕರು ತಾವು ಮಾಡಿದ ಯೋಗ ಸಾಧನೆ ಹಾಗೂ ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಭಾವಚಿತ್ರ ಮುಖಾಂತರ ಹೊರತಂದಿದ್ದಾರೆ. ಯೋಗದ ಲವಲವಿಕೆ ಇದ್ದವರು ಈ ಪುಸ್ತಕವನ್ನು ಕೊಂಡುಕೊಂಡು ಓದಬೇಕೆಂದು ಹೇಳಿದರು.

ತಹಶೀಲ್ದಾರ್ ಆರ್ ಉಮಾದೇವಿ, ಡಿವೈಎಸ್ಪಿ ಸತೀಶ ಚಿಟಗುಪ್ಪಿ, ಸಿಪಿಆಯ್ ಎಚ್ ಶೇಖರಪ್ಪ, ಡಾ.ಪಿ.ಎಸ್ ಕುಲಕರ್ಣಿ ಲೇಖಕರಾದ ಶಿವಪುತ್ರ ಯಾದವಾಡ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ ಅತಿಥಿಗಳಾಗಿ ಆಗಮಿಸಿದ್ದರು.

ಪತಂಜಲಿ ಹರಿದ್ವಾರ ಪೀಠದ ಅಥಣಿ ಶಾಖೆಯ ಅಧ್ಯಕ್ಷ  ಎಸ್ ಕೆ ಹೊಳೆಪ್ಪ ಅವರಿಂದ ಯೋಗದ ಪ್ರಾತ್ಯಕ್ಷತೆ ಹಾಗೂ ಸಾರ್ವಜನಿಕರಿಗೆ ಯೋಗ ಶಿಬಿರ ನಡೆಯಿತು. ಪ್ರಾಸ್ತಾವಿಕಾವಾಗಿ ಡಾ. ವಿ.ಎಂ ಚಿಂಚೋಳಿಮಠ, ಸ್ವಾಗತವನ್ನು ಬಳವಂತ ಪತ್ತಾರ ಮಾಡಿದರು. ವೇದಿಕೆಯ ಗಣ್ಯರಿಂದ ಭಾರತಮಾತೆಯ ಬಾವಚಿತ್ರಕ್ಕೆ ಪುಷ್ಪಾರ್ಪಣೆ, ಸಸಿಗೆ ನೀರೆರೆಯುವ ಕಾರ್ಯ ನಡೆಯಿತು. ಅರುಣ ಯಲಗುದ್ರಿ. ಡಾ.ಸುಹಾಸ ಕುಲಕರ್ಣಿ. ಉಪನ್ಯಾಸಕ ಎಂ ಪಿ ಮೇತ್ರಿ , ಬಿ.ಎ ಚವ್ಹಾಣ. ಸುಭಾಷ ಕುಲಕರ್ಣಿ ಮುರಗೇಶ ಮಡಿವಾಳ, ಅಪ್ಪಾಸಾಹೇಬ ತಾಂಬಟ, ಸುರೇಶ ಮಾಚಕನೂರ, ಹನುಮಂತ ಐಗಳಿ,ಭರತ ಸೋಮಯ್ಯ, ಜಾಧವ, ರೋಹಿಣಿ ಯಾದವಾಡ, ಗೀತಾ ತೋರಿ, ಗೀತಾ ಬೋರಾಡೆ, ಶುಭಾಂಗಿ ಪಾಟೀಲ, ಮೃಣಾಲಿನಿ ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

ಭವ್ಯ ಕ್ರಿಡಾಂಗಣದಲ್ಲಿ ಅಸಂಖ್ಯಾತ ಜನರಿಂದ ಯೋಗ ನಡೆಯಿತು. ಧನಂಜಯ ತಬಿಬಿ ಇವರಿಂದ ಯೋಗಗೀತೆ. ಪ್ರಣಮ್ಯ ಜೋಶಿ, ವೈಷ್ಣವಿ ಶಿರಗುರ ಇವರಿಂದ ಯೋಗ ಪ್ರಾರ್ಥನೆಯಾಯಿತು. ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ನಿರೂಪಿಸಿದರು. ಪ್ರಿಯಂವದಾ ಹುಲಗಬಾಳಿ ಅವರಿಂದ ವಂದನಾರ್ಪಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News