ಹರಿಕಥೆ ಎನ್ನುವುದು ಅವಹೇಳನಕ್ಕೆ ಒಳಗಾಗಿದೆ: ಕೆ.ಮಹಾಬಲ ಶೆಟ್ಟಿ
ಮೂಡಿಗೆರೆ, ಜೂ.24: ಪ್ರಸ್ತುತ ಸಮಾಜದಲ್ಲಿ ಹರಿಕಥೆ ಎನ್ನುವುದು ಅವಹೇಳನಕ್ಕೆ ಒಳಗಾಗಿದೆ. ಆಧುನೀಕರಣದ ಇಂದಿನ ಯುಗದಲ್ಲಿ ಹರಿಕಥೆಯ ಮಹತ್ವ ಏನು ಎಂಬುದನ್ನು ಜನರಿಗೆ ಅರಿವು ಮಾಡಿಕೊಡಬೇಕಾಗಿದೆ. ಪುರಾಣದಲ್ಲಿರುವ ಕಥೆಗಳನ್ನು ಹೇಳುವಂತದ್ದು ಮಾತ್ರವಲ್ಲದೆ ಸಮಾಜದ ಸವಾಲುಗಳಿಗೆ ಉತ್ತರ ನೀಡುವಂತ ಕೆಲಸ ಮಾಡಬೇಕು ಎಂದು ಹರಿಕಥಾ ಪರಿಷತ್ತು ಮಂಗಳೂರಿನ ಅಧ್ಯಕ್ಷ ಹಾಗೂ ಹರಿಕಥಾ ವಿದ್ವಾಂಸಕೆ.ಮಹಾಬಲ ಶೆಟ್ಟಿ ತಿಳಿಸಿದರು.
ಅವರು ಹೊರನಾಡಿನ ಮಾಂಗಲ್ಯ ಮಂಟಪದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಸ್ಥಾನ, ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಆಶ್ರಯದಲ್ಲಿರಾಜ್ಯ ಮಟ್ಟದ ಹರಿಕಥಾ ಕೀರ್ತನ ಕಾರ್ಯಗಾರ,ಸಂತ ಶ್ರೀಭದ್ರಗಿರಿ ಅಚ್ಯುತದಾಸರ ಸಂಸ್ಮರಣೆ ಮತ್ತು ರಾಜ್ಯ ಮಟ್ಟದ ಕೀರ್ತನ ಕಲಾ ಸಮ್ಮೇಳನದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೈತಿಕ ಮೌಲ್ಯಗಳನ್ನು ತನ್ನ ಸ್ವಂತ ಜೀವನದಲ್ಲಿ ಯಾರಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅವನ್ನು ಯಾವತ್ತಿಗೂ ಹರಿದಾಸನಾಗಲು ಸಾದ್ಯವಾಗುವುದಿಲ್ಲ. ಪ್ರಸ್ತುತ ವಿದ್ಯಾಮಾನದಲ್ಲಿ ಮನುಷ್ಯನಲ್ಲಿ ನೈತಿಕ ಮೌಲ್ಯದ ಪ್ರಜ್ಞೆಯ ಕೊರತೆ ಇದೆ ಅದಕ್ಕೆ ತಮ್ಮ ಪುರಾಣಗಳಲ್ಲಿರುವ ಆದರ್ಶಗಳನ್ನು ಹರಿಕಥೆಗಳ ಮುಖಾಂತರ ಬಿತ್ತರಿಸುವಂತ ಹೊಣೆಗಾರಿಗೆ ಹರಿದಾಸರಿಗಿದೆ ಎಂದರು.
ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಮಾತನಾಡಿ, ಹರಿದಾಸರಿಗೆ ನೈತಿಕತೆ,ಸಂಸ್ಕಾರ,ಜ್ಞಾನ ಬಂಡಾರ,ತಿಳುವಳಿಕೆ ಇದ್ದರೆ ಮಾತ್ರ ಹರಿಕಥೆ ಮುಂದುವರೆಯಲು ಸಾದ್ಯವಾಗುತ್ತದೆ.ನಮ್ಮ ಕಲೆಗೆ ಯಾವತ್ತೂ ಅಪಚಾರವಾಗದೆ ಇರುವ ಹಾಗೆ ನಡೆದುಕೊಳ್ಳಬೇಕಾಗುತ್ತದೆ ನಮ್ಮ ಕಲೆಗೆ ಯಾವಾಗ ಅಪಚಾರ ಮಾಡುತ್ತೇವೆಯೋ ಅದು ನಮಗೆ ನಾವೇ ಅಪಚಾರ ಮಾಡಿಕೊಂಡಂತೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಡಾ. ತುಮಕೂರು ಲಕ್ಷ್ಮಣದಾಸರು,ಕೆಸಿಎ ಬ್ಯಾಂಕ್ ಅಧ್ಯಕ್ಷ ಎಂ.ಎ.ಜಯರಾಮ್ ರಾವ್ ಬೆಂಗಳೂರು, ಜಿ.ಕೆ.ಮಂಜಪ್ಪಯ್ಯ,ತಾಪಂ ಸದಸ್ಯರಾದ ಮೀನಾಕ್ಷಿ ಮತ್ತಿತರರಿದ್ದರು.