ಬಾಲಕಿ ಆತ್ಮಹತ್ಯೆ
ಬಾಗೇಪಲ್ಲಿ, ಜೂ.24; ಪೋಷಕರ ಬುದ್ದಿವಾದಕ್ಕೆ ಮನನೊಂದ ಪಟ್ಟಣದ ಶಿಕ್ಷಕಿ ಪುಷ್ಪಲತಾ ಎಂಬವರ ಪುತ್ರಿ ಮಧುರಿಮ(14) ತನ್ನ ಮನೆಯಲ್ಲಿ ಸೀಮೆ ಸುರಿದುಕೊಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಪಟ್ಟಣದ 6ನೇ ವಾರ್ಡ್‌ನಲ್ಲಿ ನಡೆದಿದೆ.
ಪ್ರಕರಣಕ್ಕೆ ಮುನ್ನಾ ಶುಕ್ರವಾರ ರಾತ್ರಿ ತಾಯಿ ಜತೆ ಕಾಫಿ ಕುಡಿದು ನಂತರ ತಾಯಿ ಮಧುರಿಮಳನ್ನು ಶಾಲೆಯಲ್ಲಿ ನೀಡಿರುವ ಹೋಂ ವರ್ಕ್ ಬಗ್ಗೆ ತರಾಟೆಗೆ ತೆಗೆದುಕೊಂಡು ಕೆಳ ಅಂತಸ್ಥಿನ ಟೈಲರಿಂಗ್ ಕೆಲಸ ನಿರ್ವಹಿಸಲು ಇಳಿದು ಬಂದಿದ್ದಳು. ಇದರಿಂದ ಮನನೊಂದು ಬಾಲಕಿ ರಾತ್ರಿ 7-30ರ ಸಮಯದಲ್ಲಿ ಮೇಲಂತಸ್ಥಿನ ಕೊಠಡಿಗೆ ಹೋಗಿ ಕಿಟಕಿ,ಬಾಗಿಲು ಚಿಲಕಗಳನ್ನು ಭದ್ರಪಡಿಸಿಕೊಂಡು ಸೀಮೆ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಾತ್ರಿ 9-30 ಸಮಯವಾದರೂ ಮಗಳು ಊಟಕ್ಕೆ ಬಾರದಿರುವುದನ್ನು ಕಂಡ ತಾಯಿ ಪುಷ್ಪಲತಾ ಅವರು ಊಟಕ್ಕೆ ಕರೆಯಲು ಹೋದಾಗ ಕೊಠಡಿಯ ಚಿಲಕ ಹಾಕಲಾಗಿತ್ತು. ಎಷ್ಟು ಕೂಗಿದರೂ ಹೊರಗೆ ಬಾರದಿದ್ದಾಗ ಅನುಮಾನಗೊಂಡ ತಾಯಿ ಕೊಠಡಿಯ ಚಿಲಕವನ್ನು ಹೊಡೆದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪುಷ್ಪಲತಾ ಹಾಗೂ ನಾಗರಾಜ್ ಅವರ ದಂಪತಿಗಳಿಗೆ ಏಕೈಕ ಪುತ್ರಿಯಾಗಿರುವ ಮಧುರಿಮ ಸಾವು ದಂಪತಿಗಳ ಆಕ್ರಂದನ ಮುಗಿಲುಮುಟ್ಟಿತ್ತು.
ಯಂಗ್ ಇಂಡಿಯಾ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಧುರಿಮ ಸಾವು ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರನ್ನು ಶೋಕಸಾಗದಲ್ಲಿ ಮುಳಗಿಸಿತ್ತು. ಬೆಳಗ್ಗೆ ಮಧುರಿಮ ಸಾವಿಗೆ ಶಾಲೆಯ ಆವರಣದಲ್ಲಿ 2 ನಿಮಿಷ ಮೌನಾಚರಣೆ ನಡೆಸಿ ಶಾಲೆಗೆ ರಜೆ ಘೋಷಿಸಲಾಗಿತ್ತು.
ಘಟನಾ ಸ್ಥಳಕ್ಕೆ ಆರಕ್ಷಕ ಉಪ ನಿರೀಕ್ಷಕ ಎಸ್.ನರೇಶ್ ನಾಯ್ಕೆ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.