ಮೀರಾಕುಮಾರ್‌ಗೆ ಜೆಡಿಎಸ್ ಬೆಂಬಲ
Update: 2017-06-25 13:23 IST
ಬೆಂಗಳೂರು,ಜೂ.25: ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮೀರಾಕುಮಾರ್‌ಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.
ಮೀರಾಕುಮಾರ್ ನಾಮಪತ್ರ ಸೂಚಕರಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರ ಸ್ವಾಮಿ ರವಿವಾರ ಇಲ್ಲಿ ಸಹಿ ಹಾಕುವ ಮೂಲಕ ತಮ್ಮ ಪಕ್ಷದ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮೀರಾಕುಮಾರ್ ಆಯ್ಕೆಯಾಗಿದ್ದು, ಕೆಪಿಸಿಸಿ ಕಚೇರಿಗೆ ಇಂದು ತಲುಪಿದ ನಾಮಪತ್ರಕ್ಕೆ ಸೂಚಕರಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿ ಹಾಕಿದ್ದಾರೆ. ಜು.17ಕ್ಕೆ ರಾಷ್ಟ್ರಪತಿ ಚುನಾವಣೆಯು ನಡೆಯಲಿದೆ.