×
Ad

ತುಮಕೂರು: ಜೈನ್ ಭವನ ನಿರ್ಮಾಣಕ್ಕೆ ಶಾಸಕರಿಂದ 25 ಲಕ್ಷ ರೂ ಚೆಕ್ ವಿತರಣೆ

Update: 2017-06-25 18:48 IST

ತುಮಕೂರು.ಜೂ.25:ನಗರದ ಬಿ.ಹೆಚ್.ರಸ್ತೆಯಲ್ಲಿರುವ ದಿಗಂಬರ ಜೈನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಡಾ.ರಫೀಕ್ ಅಹಮದ್ ಅಲ್ಪ ಸಂಖ್ಯಾತರ ಕಲ್ಯಾಣ ಆಯೋಗದಿಂದ ಬಿಡುಗಡೆ ಮಾಡಿದ 25 ಲಕ್ಷ ರೂಗಳ ಚೆಕ್‌ನ್ನು ಜೈಸ ಸಮುದಾಯದ ಮುಖಂಡರಿಗೆ ಹಸ್ತಾಂತರಿಸಿದರು.

ನಗರದ ಬಿ.ಹೆಚ್.ರಸ್ತೆಯಲ್ಲಿ ನಿರ್ಮಿಸುತ್ತಿರುವ ದಿಗಂಬರ ಜೈನ ಸಮುದಾಯ ಭವನಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಆಯೋಗದಿಂದ 1 ಕೋಟಿ ರೂ ನೀಡಿದ್ದು, ಇದರಲ್ಲಿ ಈಗಾಗಲೇ 75 ಲಕ್ಷ ರೂಗಳನ್ನು ನೀಡಿದ್ದು, ಕೊನೆಯ ಕಂತಾಗಿ 25 ಲಕ್ಷ ರೂಗಳನ್ನು ಶಾಸಕರು ತಮ್ಮ ಗೃಹ ಕಚೇರಿಯಲ್ಲಿ ಸಮುದಾಯದ ಮುಖಂಡರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಡಾ.ರಫೀಕ್ ಅಹಮದ್ ಅವರು,2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮುಸ್ಲಿಂ, ಕ್ರಿಶ್ಚಿಯನ್, ಜೈನ್,ಪಾರ್ಸಿ, ಸಿಖ್ ಸಮುದಾಯಗಳ ಸೇರಿದಂತೆ ಅಲ್ಪಸಂಖ್ಯಾತರ ಇಲಾಖೆಗೆ 380 ಕೋಟಿ ಮಾತ್ರ ಅನುದಾನ ನೀಡಲಾಗಿತ್ತು.ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳಲ್ಲಿ ಹಂತ ಹಂತವಾಗಿ 2014-15ರಲ್ಲಿ 780 ಕೋಟಿ, 2015-16ರಲ್ಲಿ 900 ಕೋಟಿ, 2016-17ರಲ್ಲಿ 1000 ಕೋಟಿ ಹಾಗೂ ಈ ವರ್ಷ ಅಂದರೆ 2017-18ರಲ್ಲಿ 2750 ಕೋಟಿ ರೂ ನೀಡುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ.ಅಲ್ಲದೆ ಈ ಅನುದಾನ ಒಂದೇ ಸಮುದಾಯದ ಅಭಿವೃದ್ದಿಗೆ ಬಳಕೆಯಾಗಬಾರದು ಎಂಬ ಉದ್ದೇಶದಿಂದ ಕ್ರಿಶ್ಚಿಯನ್ ಮತ್ತು ಜೈನ್ ಸಮುದಾಯದವರಿಗೆ ವಿಶೇಷ ಅನುದಾನವನ್ನು ಸಹ ಮೀಸಲಿರಿಸಿದ್ದಾರೆ.ಜೈನ ಭವನ ನಿರ್ಮಾಣಕ್ಕಾಗಿ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಬಿಡುಗಡೆಗೆ ಶ್ರಮಿಸುವುದಾಗಿ ತಿಳಿಸಿದ ಅವರು,ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಅಡಿಯಲ್ಲಿಯೂ ಈಗಾಗಲೇ ಜೈನ ಭವನ ನಿರ್ಮಾಣಕ್ಕೆ 10 ಲಕ್ಷ ರೂ ನೀಡಲಾಗಿದೆ ಎಂದರು.

ಅಲ್ಪಸಂಖ್ಯಾತ ಸಮುದಾಯದ ಬಡವರಿಗೆ ಅನುಕೂಲವಾಗುವಂತೆ ಬಿದಾಯಿ ಯೋಜನೆ,ಅರಿವು, ಶ್ರಮಶಕ್ತಿ ಯೋಜನೆಗಳ ಅಡಿಯಲ್ಲಿ ಜೈನ ಸಮುದಾಯದ ಬಡ ಮಕ್ಕಳ ವಿದ್ಯಾಭ್ಯಾಸ,ವಿದೇಶದಲ್ಲಿ ಉನ್ನತ ವಿದ್ಯಾಬ್ಯಾಸಕ್ಕೆ, ಅರ್ಥಿಕ ಅಭಿವೃದ್ದಿಗೆ ಸಾಕಷ್ಟು ನೆರವು ನೀಡುತಿದ್ದು, ಇದರ ಲಾಭವನ್ನು ಸಮುದಾಯದ ಮುಖಂಡರ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕರು ಸಮುದಾಯ ಮುಖಂಡರಿಗೆ ಸಲಹೆ ನೀಡಿದರು.

ಜೈನ ಸಮುದಾಯದ ಎಸ್.ಜೆ.ನಾಗರಾಜು ಮಾತನಾಡಿ, ಪ್ರಸ್ತುತ ದಿಗಂಬರ್ ಜೈನ ಸಮುದಾಯ ಭವನದಲ್ಲಿ 60 ವಿದ್ಯಾರ್ಥಿಗಳಿಗೆ ಹಾಸ್ಟಲ್ ವ್ಯವಸ್ಥೆ ಮಾಡಿದ್ದು,ಇದನ್ನು 100 ಮಕ್ಕಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹಾವೀರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನು ಆಚರಿಸಲು ಆದೇಶ ಹೊರಡಿಸಿದ್ದಕ್ಕಾಗಿ ಹಾಗೂ 2018ರ ಫೆಬ್ರವರಿಯಲ್ಲಿ ಶ್ರವಣಬೆಳಗುಳದಲ್ಲಿ ನಡೆಯುವ ಮಹಾಮಸ್ತಕಾಭೀಷೇಕಕ್ಕೆ ಈ ಸಾಲಿನ ಬಜೆಟ್‌ನಲ್ಲಿ 172 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ಸರಕಾರವನ್ನು ಮತ್ತು ಮುಖ್ಯಮಂತ್ರಿಯವರನ್ನು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News