×
Ad

ಮುಂಡಗೋಡ: ವಿದ್ಯುತ್ ಹರಿದು ಆಕಳು ಸಾವು

Update: 2017-06-25 19:52 IST

ಮುಂಡಗೋಡ, ಜೂ.25: ವಿದ್ಯುತ್ ತಂತಿ ಹರಿದು ಬೆಲೆ ಬಾಳುವ ಝರ್ಸಿ ಆಕಳು ಸಾವಿಗೀಡಾದ ಘಟನೆ ಇಂದಿರಾನಗರ ನ ಕಲಘಟಗಿ ರಸ್ತೆಯ ಕೆರೆಯ ಪಕ್ಕ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಗದ್ದೆಯಲ್ಲಿ ಮೇವು ಮೇವುತ್ತಿದ್ದಾಗ ಕೆರೆಯ ಮೇಲ್ಭಾಗದಿಂದ ಹಾದು ಹೋಗಿರುವ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದೆ ಎಂದು ಆಕಳಿನ ಮಾಲಿಕ ಯಲ್ಲಾಪುರ ರಸ್ತೆಯ ನಿವಾಸಿ ಮಹ್ಮದ ಶರೀಫ ಪೋಕಾಕಿ ಅಪಾದಿಸಿದ್ದಾನೆ.

36 ಸಾವಿರ ರೂ ಬೆಲೆಬಾಳುವ ಆಕಳು ಪ್ರಥಮ ಕರು ಮರಿ ಹಾಕಿ 2 ತಿಂಗಳಾಗಿತ್ತು ಬೆಳಗ್ಗೆ ಮತ್ತು ಸಂಜೆ ಸುಮಾರು 16 ಲೀಟರ್ ಹಾಲು ಹಿಂಡುತ್ತಿತ್ತು ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಆಕಳು ಸಾಯಲು ಹೆಸ್ಕಾಂ ನವರ ನಿರ್ಲಕ್ಷ್ಯ ಎಂದು ಹೇಳಲಾಗಿದೆ. ನನಗೆ ಆದ ನಷ್ಟವನ್ನು ಭರಿಸಕೊಡಬೇಕೆಂದು ಒತ್ತಾಯಿಸಿದ್ದಾನೆ.

ಈ ಕುರಿತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News