ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಈದುಲ್ ಫಿತ್ರ್
Update: 2017-06-26 19:27 IST
ಮಡಿಕೇರಿ ಜೂ.26 : ಜಿಲ್ಲೆಯಾದ್ಯಂತ ಈದುಲ್ ಪಿತ್ರ್ ಅನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಸೀದಿಗಳಲ್ಲಿ ಸಮೂಹಿಕ ಪ್ರಾರ್ಥನೆ ನೆರವೇರಿತು.
ಮಡಿಕೇರಿ ನಗರದ ಬದ್ರಿಯಾ ಮಸೀದಿ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಹಬ್ಬದ ಸಂಭ್ರಮವನ್ನು ಹಂಚಿ ಕೊಂಡರು. ಶಾಂತಿ, ಸೌಹಾರ್ದತೆಗಾಗಿ ಧರ್ಮಗುರುಗಳು ಇದೇ ಸಂದರ್ಭ ಸಂದೇಶ ನೀಡಿದರು.
ವಿರಾಜಪೇಟೆ ಪಟ್ಟಣದ ಮುಖ್ಯ ಬೀದಿಯ ಶಾಫೀ ಜುಮಾ ಮಸೀದಿಯಲ್ಲಿ ಮೌಖಲೀಲ್ ಇರ್ಫಾನಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ನೌಷಾದ್ ದಾರಿಮಿ, ಗೋಣಿಕೊಪ್ಪ ರಸ್ತೆಯ ಇಮಾಮ್ ಮುಸ್ಲಿಂ ಜುಮಾ ಮಸೀದಿಯಲ್ಲಿ ಪ್ರವಚನ ನಡೆಯಿತು.