×
Ad

ದಾವಣಗೆರೆ: ಸಂಭ್ರಮದ ಈದ್

Update: 2017-06-26 20:25 IST

ದಾವಣಗೆರೆ, ಜೂ. 26: ದಾವಣಗೆರೆಯಲ್ಲಿ ಸೋಮವಾರ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಯಿತು. ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಪರಸ್ಪರ ಶುಭಾಶಯಕೋರಿದರು. ಇಲ್ಲಿನ ಪಿ.ಬಿ. ರಸ್ತೆಯ ಹಳೇ ಈದ್ಗಾ ಮೈದಾನ, ಮಾಗನಹಳ್ಳಿ ರಸ್ತೆಯ ರಜಾವುಲ್ಲಾ ಮುಸ್ತಫಾ, ನಗರದ ಹೊಸ ಈದ್ಗಾ ಮೈದಾನದಲ್ಲಿ ಹಾಗೂ ಕೈಗಾರಿಕಾ ಪ್ರದೇಶದಲ್ಲಿರುವ ಖಲಂದರಿಯಾ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಎಸ್. ಗುಳೇದ್ ಸೇರಿದಂತೆ ಮತ್ತಿತರ ಮುಖಂಡರುಗಳು ಶುಭಾಶಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News