ಪ್ರಧಾನಿ ಮೋದಿಗೆ ಟ್ರಂಪ್ ಪುತ್ರಿ ಧನ್ಯವಾದ ಹೇಳಿದ್ದೇಕೆ ಗೊತ್ತೇ ?

Update: 2017-06-27 06:29 GMT

ವಾಷಿಂಗ್ಟನ್, ಜೂ.26: ಸೋಮವಾರ ಶ್ವೇತಭವನದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ತಮ್ಮ ಪ್ರಥಮ ಭೇಟಿಯ ವೇಳೆ ಅವರ ಪುತ್ರಿ ಇವಾಂಕ ಟ್ರಂಪ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಉದ್ಯಮಿಗಳ ನಿಯೋಗವೊಂದರ ನೇತೃತ್ವ ವಹಿಸುವಂತೆ ಅವರಿಗೆ ಕೋರಿಕೊಂಡಿದ್ದಾರೆ.

ತಾವು ಇವಾಂಕ ಟ್ರಂಪ್ ಅವರಿಗೆ ನೀಡಿರುವ ಆಹ್ವಾನದ ಬಗ್ಗೆ ಟ್ರಂಪ್ ಅವರ ಜತೆ ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮೋದಿ ಹೇಳಿದರೆ, ನಂತರ ಟ್ರಂಪ್ ಅವರು ಕೂಡ ಇದನ್ನು ಉಲ್ಲೇಖಿಸಿ ‘‘ಮೋದಿ ಆಹ್ವಾನವನ್ನು ಆಕೆ ಒಪ್ಪಿದ್ದಾಳೆ ಎಂದು ನಾನು ನಂಬಿದ್ದೇನೆ’’ ಎಂದು ಮೋದಿ ತಮ್ಮ ಕುಟುಂಬವನ್ನು ಭಾರತ ಭೇಟಿಗೆ ಆಹ್ವಾನವಿತ್ತ ನಂತರ ಹೇಳಿದರು.

ಅಮೆರಿಕನ್ ಉದ್ಯಮಿಗಳ ನಿಯೋಗವೊಂದರ ನೇತೃತ್ವ ವಹಿಸಿ ತಮ್ಮನ್ನು ಭಾರತದಲ್ಲಿ ನಡೆಯಲಿರುವ ಗ್ಲೋಬಲ್ ಎಂಟ್ರಪ್ರನರ್ ಶಿಪ್ ಸಮ್ಮಿಟ್ ಗೆ ಮೋದಿ ನೀಡಿದ ಆಹ್ವಾನಕ್ಕೆ ಪ್ರತಿಯಾಗಿ ಇವಾಂಕ ‘‘ಥ್ಯಾಂಕ್ಯೂ ಪ್ರೈಮ್ ಮಿನಿಸ್ಟರ್ ಮೋದಿ’’ ಎಂದು ಟ್ವೀಟ್ ಮಾಡಿದ್ದಾರೆ.
ಇವಾಂಕ ಮತ್ತಾಕೆಯ ಪತಿ ಜಾರೆಡ್ ಕುಶ್ನೆರ್ ಇಬ್ಬರೂ ಅಧ್ಯಕ್ಷ ಟ್ರಂಪ್ ಅವರ ನಿಕಟ ಸಲಹೆಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News