ಇತಿಹಾಸ ಕಂಡಂತಹ ಅಪ್ರತಿಮ ವಿನ್ಯಾಸಗಾರ ಕೆಂಪೇಗೌಡ: ಡಾ.ಡಿ.ಎಲ್. ವಿಜಯ್‌ಕುಮಾರ್
ಚಿಕ್ಕಮಗಳೂರು, ಜೂ.27: ನಾಡಪ್ರಭು ಕೆಂಪೇಗೌಡ ಇತಿಹಾಸ ಕಂಡಂತಹ ಅಪ್ರತಿಮ ವಿನ್ಯಾಸಗಾರ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ಡಿ.ಎಲ್.ವಿಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಂಗಳವಾರ ನಗರದ ಒಕ್ಕಲಿಗರ ಸಂಘಕೊಂಡಿದ್ದ ನಾಡಪ್ರಭು ಕೆಂಪೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
480 ವರ್ಷಗಳ ಹಿಂದೆ 38 ವರ್ಷಗ ಕಾಲ ಅಧಿಕಾರವನ್ನು ಮಾಡಿದಂತ ಕೆಂಪೇಗೌಡರು ದೂರದರ್ಶಿತ್ವ, ರಾಜಕೀಯ ನೈಪುಣ್ಯತೆ, ಅಭಿವೃಧ್ಧಿ ಮುನ್ನೊಟ ಹಾಗೂ ಕಲೆಗೆ ನೀಡಿದ ಪ್ರೋತ್ಸಾಹ ಸ್ಮರಣೀಯ. ಇಂದಿನ ಬೆಂಗಳೂರನ್ನು ವಿಶ್ವವೇ ಗಮನಿಸಿರುವುದಕ್ಕೆ ಇವರ ಕೊಡುಗೆ ಅಪೂರ್ವ ಎಂದರು. ಜಾತಿ ಧರ್ಮಗಳನ್ನು ಮೀರಿ ಕುಲ ಕಸುಬಿಗೆ ಅಧ್ಯತೆ ಕೊಡುವ ನಿಟ್ಟಿನಲ್ಲಿ ಆ ಕಸುಬಿನ ಜನಾಂಗದವರಿಗೆ ವಿಶೇಷ ರೀತಿಯಲ್ಲಿ ಜಾಗವನ್ನು ತೋರಿಸಿರುವ ಮೂಲಕ ಆ ಜಾಗವನ್ನು ನಿರ್ದಿಷ್ಟ ಪಡಿಸುವ ಮೂಲಕ ಅಕ್ಕಿಪೇಟೆ, ರಾಗಿಪೇಟೆ, ಬಳೆಪೇಟೆ, ಬಂಗಾರಪೇಟೆ, ದೊಡ್ಡ ಪೇಟೆ, ಚಿಕ್ಕಪೇಟೆ, ಸುಣ್ಣಕಲ್ಲ ಪೇಟೆ, ನಗರ್ತ ಪೇಟೆ ಮುಂತಾದ ವ್ಯವಹಾರಿಕ ಸ್ಥಳಗಳಲ್ಲಿ ವ್ಯವಹಾರ ಮಾಡಲು ಅನುಕೂಲ ಮಾಡಿ ಕೊಟ್ಟಿದ್ದು, ಇಂದು ಕೂಡ ಅದೇ ಹೆಸರಿನಲ್ಲಿ ಮುಂದುವರಿಯುತ್ತಿರುವುದು ವಿಶೇಷ ಎಂದು ನುಡಿದರು.
ಬೆಂಗಳೂರಿನಲ್ಲಿ ಯಾವುದೇ ಶಾಶ್ವತ ನದಿ ಮೂಲ ಇಲ್ಲದೇ ಇದ್ದು ಸುಮಾರು 500 ಕ್ಕೂ ಹೆಚ್ಚು ಕೆರೆ, ಕಟ್ಟೆ, ಕಲ್ಯಾಣಿ, ಕಾಲುವೆಗಳನ್ನು ನಿರ್ಮಿಸಿ ನೀರಿನ ಬರವನ್ನು ನೀಗಿಸಿದ ಕೀರ್ತಿ ಅವರಿಗೆ ಸಲುತ್ತದೆ. ಈಗಾಗಲೇ ಸಮಾಜಕ್ಕೆ ಸೇವೆ ಮಾಡಿದ ಹಲವು ಗಣ್ಯರ ಜಯಂತಿ ನಡೆಯುತ್ತಿದೆ. ಈ ವರ್ಷದಿಂದ ರಾಜ್ಯ ಸರ್ಕಾರ ರಂದು ಕೆಂಪೇಗೌಡರ ಜಯಂತೋತ್ಸವ ಎಂದು ಘೋಶಿಸಿರುವುದು ಸ್ವಾಗತಾರ್ಹ. ಹಾಗೂ ಜಿಲ್ಲೆಯ ಜನತೆ ಪರವಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಒಕ್ಕಲಿಗರ ಸಂಘದ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಕೆಂಪೇಗೌಡರ ಹೆಸರಿನಲ್ಲಿ ನಗರದಲ್ಲಿ ಯಾವುದಾದರು ಒಂದು ಯೋಜನೆ ಏರ್ಪಡಿಸಿ ಅದಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರಿಡಬೇಕೆಂದು ಒತ್ತಾಯಿಸಿದರು.
ಸಂಘದ ಮಾಜಿ ನಿರ್ದೇಶಕ ಟಿ.ರಾಜಶೇಖರ್, ಜಿಲ್ಲಾ ಒಕ್ಕಲಿಗರ ಸಂಘದ ಮಹಿಳಾ ಘಟಕದ ಅಧ್ಯಕ್ಷಅರುಣಾಕ್ಷಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತೆಗೌಡ ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ನಾರಾಯಣಗೌಡ, ಎಂ.ಡಿ.ಆನಂದ್, ಶ್ರೀಮತಿ ಲಕ್ಷ್ಮಿ, ಹೆಗ್ಡೇಗೌಡರು, ಮಹಿಳಾ ಕಾರ್ಯದರ್ಶಿ ರೀನಾ ಸುಜಯ್, ಸಲಹಾಮಂಡಳಿ ಸದಸ್ಯರಾದ ಎಂ.ಡಿ.ರಮೇಶ್, ಓಂಕಾರೇಗೌಡರು, ಹೆಚ್.ಸಿ.ಸುರೇಂದ್ರ, ಆಡಳಿತಾಧಿಕಾರಿಕುಳ್ಳೆಗೌಡ, ವ್ಯವಸ್ಥಾಪಕ ರಾಜು, ಪ್ರಾಂಶುಪಾಲೆ ಶ್ರೀಮತಿ ತೇಜಸ್ವಿನಿ ಶಂಕರೇಗೌಡ, ಮುಖ್ಯಶಿಕ್ಷಕ ಶಿವಕುಮಾರ್ ಉಪಸ್ಥಿತರಿದ್ದರು.