ಕಾರು ಢಿಕ್ಕಿ:ಬೈಕ್ ಸವಾರ ಮೃತ್ಯು
Update: 2017-06-27 22:21 IST
ಮಂಡ್ಯ, ಜೂ.27: ಮಳವಳ್ಳಿ ತಾಲೂಕು ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಇಂಡಿಕಾರು ಢಿಕ್ಕಿಯೊಡೆದು ಬೈಕ್ ಸವಾರ ವೆಂಕಟೇಶ್(47) ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಹೈಕೋರ್ಟ್ ನೌಕರರಾದ ವೆಂಕಟೇಶ್ ರಮಝಾನ್ ಹಬ್ಬದ ರಜೆ ಹಿನ್ನೆಲೆಯಲ್ಲಿ ತನ್ನ ದಳವಾಯಿ ಕೋಡಿಹಳ್ಳಿ ಗ್ರಾಮಕ್ಕೆ ಆಗಮಿಸಿದ್ದಾಗ ಈ ಘಟನೆ ನಡೆದಿದೆ.